ಪ್ರಮುಖ ಸುದ್ದಿ
ಬಿಜೆಪಿ ರಾಜ್ಯಾದ್ಯಕ್ಷ ಹುದ್ದೆ ನಳಿನ್ ಕುಮಾರ್ ಕಟೀಲು ಪಾಲು!
ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಸಚಿವ ಸಂಪುಟ ರಚನೆ ಬೆನ್ನಲ್ಲೇ ರಾಜ್ಯ ಬಿಜೆಪಿ ಘಟಕದ ನೂತನ ಅದ್ಯಕ್ಷರನ್ನಾಗಿ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ಅವರನ್ನು ನೇಮಿಸಿ ಬಿಜೆಪಿ ರಾಷ್ಟ್ರೀಯ ಅದ್ಯಕ್ಷ ಅಮಿತ್ ಶಾ ಆದೇಶಿಸಿದ್ದಾರೆ. ಆ ಮೂಲಕ ಸಿಎಂ ಯಡಿಯೂರಪ್ಪಗೆ ಹೈಕಮಾಂಡ್ ಶಾಕ್ ನೀಡಿದೆ ಎನ್ನಲಾಗಿದೆ.
ಅರವಿಂದ ಲಿಂಬಾವಳಿ, ಸಿ.ಟಿ.ರವಿ ಸೇರಿದಂತೆ ಅನೇಕರ ಹೆಸರು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಕೇಳಿ ಬಂದಿದ್ದವು. ಆದರೆ. ಸಂಘ ಪರಿವಾರ ಹಿನ್ನೆಲೆಯ, ಖಟ್ಟರ್ ಹಿಂದುತ್ವವಾದಿ ನಳಿನ್ ಕುಮಾರ್ ಕಟೀಲು ಅವರನ್ನು ರಾಜ್ಯಾದ್ಯಕ್ಷರನ್ನಾಗಿಸುವ ಮೂಲಕ ಕರ್ನಾಟಕದಲ್ಲೂ ಕೇಸರಿ ಪರ್ವಕ್ಕೆ ನಾಂದಿ ಹಾಡಿದೆ ಎನ್ನಲಾಗಿದೆ.