ಪ್ರಮುಖ ಸುದ್ದಿ
ಲೋಕಾ ಫಲಿತಾಂಶ ಬಳಿಕ ರಾಜಕೀಯ ದೃವೀಕರಣ
ಫಲಿತಾಂಶದ ನಂತರ ರಾಜಕೀಯದಲ್ಲಿ ಏರು ಪೇರು
ಬೆಂಗಳೂರಃ ಲೋಕಾಸಭೆ ಚುನಾವಣೆ ಫಲಿತಾಂಶ ಮೇ.23 ರಂದು ಹೊರಬೀಳಲಿದ್ದು, ನಾವು 22 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.
ಅಲ್ಲದೆ ರಾಜಕೀಯ ದೃವಿಕರಣ ಕುರಿತು ಮಾತನಾಡಿದ ಅವರು, ಮೇ.23 ನಂತರ ಭಾರಿ ಪ್ರಮಾಣದಲ್ಲಿ ರಾಜಕೀಯ ದೃವಿಕರಣ ನಡೆಯಲಿದ್ದು, ಕಾದು ನೋಡಿ ಎಂದು ಮಾಧ್ಯಮಕ್ಕೆ ಹೇಳಿಕೆ ನೀಡುವ ಮೂಲಕ ತೀವ್ರ ಕುತುಹಳ ಕೆರಳಿಸಿದ್ದಾರೆ.
ಏನಾಗಲಿದೆ ಹೇಳಿ ಎಂದು ಮಾಧ್ಯಮದವರು ಪ್ರಶ್ನಿಸಿದಾಗ, ಈಗಲೇ ಏನು ಹೇಳಕ್ಕಾಗಲ್ಲ. ಕಾದು ನೋಡಿ ಎಂದು ಅವರು ಆಶಯ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯ ಸಾಕಷ್ಟು ಗೊಂದಲಗಳಿವೆ. ಅವೆಲ್ಲ ಮೈತ್ರಿ ಸರ್ಕಾರ ರಚಿಸಿಕೊಂಡು ಬಗೆಹರಿಸಿಕೊಳ್ಳಲು ಅಷ್ಟು ಸುಲಭವಲ್ಲ. ಮುಂದಿನ ದಿನಗಳಲ್ಲಿ ಕಾದು ನೋಡಿ ಎಂದು ಹೇಳಿದರು.