ಮೌಲ್ವಿ ಖೈರಾತಿ ಗಡಿಪಾರು ಮಾಡಿ, ಎಸಿಪಿ ದಾವುದ್ ಖಾನ್ ಅಮಾನತ್ತು ಮಾಡಿ : ಬಿಜೆಪಿ ಧರಣಿ
ಹುಬ್ಬಳ್ಳಿ: ಗಣೇಶಪೇಟೆಯಲ್ಲಿ ಈದ್ ಮಿಲಾದ್ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪಾಕಿಸ್ತಾನ ನೋಡಲು ಅಲ್ಲಿಗೆ ಹೋಗಬೇಕಿಲ್ಲ. ಗಣೇಶಪೇಟೆಯ ಪಾಕಿಸ್ತಾನದಂತೆ ಕಾಣಿಸುತ್ತಿದೆ ಎಂದು ಹೇಳುವ ಮೂಲಕ ಪಾಕಿಸ್ತಾನದ ಗುಣಗಾನ ಮಾಡಿದ್ದ ಮೌಲ್ವಿ ಅಬ್ದುಲ್ ಹಮೀದ್ ಖೈರಾತಿ ವಿರುದ್ಧ ಈಗಾಗಲೇ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ನಿನ್ನೆ ರಾತ್ರಿ ಆರೋಪಿ ಮೌಲ್ವಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ದೇಶದ್ರೋಹದ ಹೇಳಿಕೆ ನೀಡಿದ ಮೌಲ್ವಿಯನ್ನು ಗಡಿಪಾರು ಮಾಡಬೇಕು. ಅಂತೆಯೇ ಮೌಲ್ವಿ ಹೇಳಿಕೆ ನೀಡಿದ ಕಾರ್ಯಕ್ರಮದ ವೇದಿಕೆಯಲ್ಲೇ ಎಸಿಪಿ ದಾವುದ್ ಖಾನ್ ಸಹ ಉಪಸ್ಥಿತರಿದ್ದರು. ಆದರೂ, ಮೌಲ್ವಿ ಹೇಳಿಕೆ ತಡೆದಿಲ್ಲ. ತಕ್ಷಣಕ್ಕೆ ಕ್ರಮ ಕೈಗೊಳ್ಳುವ ಕೆಲಸ ಮಾಡಿಲ್ಲ. ಮಾಧ್ಯಮಗಳ ವರದಿ, ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾದ ಬಳಿಕ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಕೇಸು ದಾಖಲಿಸಿ ಬಂಧಿಸುವ ನಾಟಕ ನಡೆದಿದೆ. ಹೀಗಾಗಿ, ದೇಶದ್ರೋಹಿ ಮೌಲ್ವಿಯನ್ನು ಗಡಿಪಾರು ಮಾಡಬೇಕು. ಕರ್ತವ್ಯ ಲೋಪ ಎಸಗಿದ ಎಸಿಪಿ ದಾವೂದ್ ಖಾನ್ ಅವರನ್ನು ಅಮಾನತ್ತುಗೊಳಿಸಬೇಕೆಂದು ಬಿಜೆಪಿ ಮುಖಂಡರು ಆಗ್ರಹಿಸಿದ್ದು, ಶಹರ ಠಾಣೆ ಎದುರು ಧರಣಿ ನಡೆಸಿದ್ದಾರೆ