ಡಿಸಿ ಕಚೇರಿಗೆ ಮುತ್ತಿಗೆ : ಪ್ರತಾಪ್ ಸಿಂಹ, ನಳೀನ್, ಸುನೀಲ್, ಸಿ.ಟಿ ರವಿ ಬಂಧನ
ಡಿಸಿ ಕಚೇರಿಗೆ ಮುತ್ತಿಗೆ : ಪ್ರತಾಪ್ ಸಿಂಹ, ನಳೀನ್, ಸುನೀಲ್, ಸಿ.ಟಿ ರವಿ ಬಂಧನ
ಮಂಗಳೂರಃ ಬಿಜೆಪಿ ಯುವ ಮೋರ್ಚ ರ್ಯಾಲಿ ತಡೆಯಲು ಸ್ವತಹಃ ಪೊಲೀಸ್ ಕಮಿಷನರ್ ಬೀದಿಗಿಳಿದದ್ದನ್ನು ಖಂಡಿಸಿ ಬಿಜೆಪಿ ಯುವ ನಾಯಕರು ಮತ್ತು ಕಾರ್ಯಕರ್ತರು ನಗರದ ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಸಿದ ಹಿನ್ನೆಲೆ ಸಂಸದರಾದ ನಳೀನ್ ಕುಮಾರ್ ಕಟೀಲ್, ಪ್ರತಾಪ್ ಸಿಂಹ, ಶಾಸಕರಾದ ಸುನೀಲ್ ಕುಮಾರ್, ಸಿ.ಟಿ.ರವಿ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧನಕ್ಕೊಳಗಾದ ನಾಯಕರನ್ನು ಬಿಡುಗಡೆಗೊಳಿಸುವಂತೆ ಹೊರಗಡೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಯಾಗುತ್ತಿದ್ದು, ಡಿಸಿ ಕಚೇರಿ ಮುಂದೆ ಪೊಲಿಸ್ ಸರ್ಪಗಾವಲು ಹಾಕಲಾಗಿದೆ.
ಗುಂಪು ಗುಂಪಾಗಿ ಬೈಕ್ ನಲ್ಲಿ ಆಗಮಿಸುತ್ತಿರುವ ಕಾರ್ಯಕರ್ತರು ಡಿಸಿ ಕಚೇರಿ ಮುಂದೆ ಜಮಾಯಿಸುತ್ತಿದ್ದು ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರಿಂದ ಹರಸಾಹಸಪಡುತ್ತಿದ್ದಾರೆ.
ಬಿಜೆಪಿ ಕಾರ್ಯಕರ್ತರಿಂದ ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರಗಳ ಸುರಿಮಳೆ ಕೇಳಿ ಬರುತ್ತಿದೆ.
ತಂಡೋಪತಂಡವಾಗಿ ಬರುತ್ತಿರುವ ಕಾರ್ಯಕರ್ತರು
ಸ್ವತಃ ಬೈಕ್ ರ್ಯಾಲಿ ತಡೆಯಲು ಮುಂದಾದ ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಅವರನ್ನುಆಕ್ರೋಶಗೊಂಡ ಕಾರ್ಯಕರ್ತರಿಂದ ತಳ್ಳಾಡಿದ ಘಟನೆಯು ಜರುಗಿದೆ ಎನ್ನಲಾಗಿದೆ.
ಈ ವೇಳೆ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ತಳ್ಳಾಟ ನಡೆದಿದ್ದು, ಪೊಲೀಸರ ಶರ್ಟ್ ಹರಿದು ಹಾಕಿದ ಘಟನೆಯು ನಡೆದಿದೆ.
ನಿರಂತರವಾಗಿ ನಡೆಯುತ್ತಿರುವ ಹಿಂದು ಸಂಘಟನೆಯ ಮುಖಂಡರ ಹತ್ಯೆ ಖಂಡಿಸಿ ಬಿಜೆಪಿ ರ್ಯಾಲಿ ನಡೆಸುತ್ತಿದೆ. ನ್ಯಾಯಯುತವಾದ ಹೋರಾಟ ಹತ್ತಿಕ್ಕುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಪ್ರತಿಭಟನಕಾರರು ಆರೋಪಿಸುತ್ತಿದ್ದಾರೆ.