ಬಿಜೆಪಿಯಲ್ಲಿ ಭಿನ್ನಮತ ಸ್ಪೋಟಃ ಅಲುಗಾಡಲಿದೆಯಾ ರಾಜ್ಯ ಸರ್ಕಾರ.?
ಬಿಜೆಪಿ ಶಾಸಕರ ಸಭೆ ಃ ಭಿನ್ನಮತ ಉಲ್ಬಣವೆ.?
ಬೆಂಗಳೂರಃ ನಗರದ ಕ್ರೆಸೆಂಟ್ ರಸ್ತೆಯ ಮಾಜಿ ಸಿಎಂ ಜಗಧೀಶ ಶೆಟ್ಟರ್ ನಿವಾಸದಲ್ಲಿ ಬಿಜೆಪಿಯ ಹಲವಾರು ಶಾಸಕರು ಇಂದು ತಡ ಸಂಜೆ ಗುಟ್ಟಾಗಿ ಸೇರಿ ಸಚಿವ ಸ್ಥಾನ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ.
ಈ ಸಭೆಯಲ್ಲಿ ಉಮೇಶ ಕತ್ತಿ, ಯೋಗೇಶ, ರಾಜೂಗೌಡ, ದೇವದುರ್ಗದ ಶಿವನಗೌಡ ನಾಯಕ ವಿಜಯಪುರದ ಬಸನಗೌಡ ಪಾಟೀಲ್, ಎ.ಎಸ್.ಪಾಟೀಲ್ ನಡಹಳ್ಳಿ, ಲಮಾಣಿ, ಶಂಕರಗೌಡ ಪಾಟೀಲ್ ಸೇರಿದಂತೆ ಇತರೆ ಭಿನ್ನ ಬಿಜೆಪಿ ಶಾಸಕರ ಸಭೆ ನಡೆದಿದೆ ಎನ್ನಲಾಗಿದೆ.
ಶಾಸಕರನ್ನು ಕೇಳಿದ ಬಹಳದಿವಸದ ನಂತರ ಸೇರಿದ್ದು ಭೂಜನಕೂಟ ಏರ್ಪಡಿಸಲಾಗಿತ್ತು. ಬೇರೆ ಯಾವುದೇ ವಿಷಯ ಭಿನ್ನಮತ ಸ್ಪೋಟ್ ಎಂಬುದನ್ನು ಲಗತ್ತು ಮಾಡುವದು ಸರಿಯಲ್ಲ ಎಂಬ ಧ್ವನಿ ಕೇಳಿ ಬಂದವು.
ಅಲ್ಲದೆ ಬಲ್ಲಮೂಲಗಳಿಂದ ಸಂಪುಟದಲ್ಲಿ ಪ್ರಾಂತ್ಯ, ಜಾತಿ ವಿಭಾಗ ಮತ್ತು ಹಿರಿತನ ಮೂಲಕಸಚಿವ ಸ್ಥಾನ ನೀಡುವ ಕುರಿತು ಚರ್ಚಿಸಲಾಗಿದೆ ಎಂದಿದ್ದಾರೆ. ಅಲ್ಲದೆ ಒಂದಡೆ ಊಟಕ್ಕಾಗಿ ಸೇರಿದ್ದೇವೆ ಎಂದು ಹೇಳಿಕೆ ನೀಡುವ ಮೂಲಕ. ಭಿನ್ನಮತ ಕುರಿತು ಬಿಜೆಪಿಯ ಹಲವಾರು ಶಾಸಕರು ಮುಂದಡೆ ಇಡಲು ಹಿಂಜರಿಯುತ್ತಿರುವದು ಕಂಡು ಬಂದಿದೆ.