ಪ್ರಮುಖ ಸುದ್ದಿ

ಗ್ರಾಮ ಸ್ವರಾಜ್ಯ ಸಮಾವೇಶದಲ್ಲಿ ಗೆಲುವಿನ ಭರವಸೆ ಮೂಡಿಸಿದ ಬಿಜೆಪಿ

ಕಾರ್ಯಕರ್ತರನ್ನು ನಾಯಕರನ್ನಾಗಿಸಬೇಕಿದೆ – ಡಿಸಿಎಂ ಲಕ್ಷ್ಮಣ ಸವದಿ

yadgiri, ಶಹಾಪುರಃ ಗ್ರಾಮ ಮಟ್ಟದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕಿದೆ. ಹಳ್ಳಿಯಿಂದ ದಿಲ್ಲಿವರೆಗೂ ಬಿಜೆಪಿ ಅಧಿಕಾರ ಪಡೆಯುವ ಮೂಲಕ ದೇಶ ಸೇವೆಯಲ್ಲಿ ಸಮರ್ಪಕವಾಗಿ ತೊಡಗಿಸಿಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಕಾರ್ಯಕರ್ತರನ್ನು ನಾಯಕರನ್ನಾಗಿಸುವ ಹೊಣೆ ತೊಟ್ಟು ನಾವೆಲ್ಲ ಹದಿನೈದು ದಿನ ಕಾರ್ಯಕರ್ತರ ಗೆಲುವಿಗಾಗಿ ಶ್ರಮಿಸಬೇಕಿದೆ. ಎಲ್ಲಾ ರೀತಿಯ ಸಹಾಯ ಸಹಕಾರ ನೀಡುವ ಮೂಲಕ ಗ್ರಾಮ ಮಟ್ಟದಲ್ಲಿ ಬಿಜೆಪಿ ವಿಜಯ ದುಂದುಬಿ ಬಾರಿಸಬೇಕೆಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಕರೆ ನೀಡಿದರು.

ನಗರದ ಹೊರವಲಯದ ಆರಬೋಳ ಕಲ್ಯಾಣ ಮಂಟಪದಲ್ಲಿ ನಡೆದ ಜಿಲ್ಲಾ ಮಟ್ಟದ ಗ್ರಾಮ ಸ್ವರಾಜ್ಯ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಮಾಣಿಕ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ನೀಡುವ ಪಕ್ಷ ಯಾವುದಾದರೂ ಇದ್ರೆ ಅದು ಬಿಜೆಪಿ ಪಕ್ಷ. ಓರ್ವ ಅಶೋಕ ಗಸ್ತಿಯಂಥ ಸಾಮಾನ್ಯ ಕಾರ್ಯಕರ್ತರನ್ನು ರಾಜ್ಯಸಭೆ ಸದಸ್ಯರನ್ನಾಗಿ ಮಾಡಿರುವದು ಇದು ಸಾಕ್ಷಿ ಕರಿಸುತ್ತದೆ. ಪಕ್ಷಕ್ಕಾಗಿ ಮೂರು ದಶಕಗಳ ಕಾಲ ಗಸ್ತಿ ಶ್ರಮಿಸಿದ್ದರು. ಈ ಗ್ರಾಪಂ ಚುನಾವಣೆಯಲ್ಲಿ ಪ್ರಾಮಾಣಿಕ ಕಾರ್ಯಕರ್ತರನ್ನು ಗುರುತಿಸಿ ಅವರನ್ನು ನಾಯಕರನ್ನಾಗಿ ಮಾಡುವ ಹೊಣೆ ನಮ್ಮೆಲ್ಲ ನಾಯಕರ ಮೇಲಿದೆ. ಪ್ರಧಾನಿಯವರು ಮತ್ತು ಅಮಿತ್ ಶಾ, ನಡ್ಡಾ ಅವರು ಸೇರಿದಂತೆ ಸಿಎಂ ಯಡಿಯೂರಪ್ಪನವರು ಸಾಮೂಹಿಕವಾಗಿ ಚರ್ಚಿಸಿ ಈ ಬಾರಿ ಗ್ರಾಪಂನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ನಮ್ಮೆಲ್ಲರಿಗೆ ಸಂದೇಶ ನೀಡಿದ್ದು, ಅವರೆಲ್ಲರ ಸೂಚನೆ ಮೇರೆಗೆ ನಾವೆಲ್ಲ ನಿಮ್ಮೊಂದಿಗೆ ಕೆಲಸ ಮಾಡಲಿದ್ದೇವೆ ಎಂದರು.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ಜಿಲ್ಲಾ ಉಸ್ತುವಾರಿ ಅಶ್ವತ್ಥನಾರಾಯಣ, ಶಾಸಕ ಮತ್ತು ನಗರ ನೀರು ಸರಬರಾಜು ಒಳಚರಂಡಿ ಯೋಜನೆ ನಿಗಮದ ಅಧ್ಯಕ್ಷ ರಾಜೂಗೌಡ (ನರಸಿಂಹ ನಾಯಕ) ಸುರಪುರ, ಬೀದರ ಸಂಸದ ಭಗವಂತ ಖೂಬಾ, ಶಾಸಕ ವೆಂಕಟರಡ್ಡಿ ಮುದ್ನಾಳ, ಮಾಜಿ ಸಚಿವ ಬಾಬುರಾವ ಚಿಂಚನಸೂರ, ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ, ಎಂಎಲ್‍ಸಿಗಳಾದ ಶಶೀಲ್ ನಮೋಶಿ, ಬಿ.ಜಿ.ಪಾಟೀಲ್ ಮಾತನಾಡಿದರು.

ಮಾಜಿ ಎಂಎಲ್‍ಸಿ ಅಮಾತೆಪ್ಪ ಕಂದಕೂರ, ಅಮರನಾಥ ಪಾಟೀಲ್, ಕೃಷ್ಣಾ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ಮಹಿಳಾ ಮೋರ್ಚಾದ ಲಲಿತಾ ಅನಪೂರ, ನಾಗರತ್ನ ಕುಪ್ಪಿ, ಯಾದಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಶರಣಭೂಪಾಲರಡ್ಡಿ, ಪ್ರಧಾನ ಕಾರ್ಯದರ್ಶಿ ದೇವಿಂದ್ರನಾಥ ನಾದ್, ಗುರು ಕಾಮಾ, ವೆಂಕಟರಡ್ಡಿ ತುಮಕೂರ, ಡಾ.ಮಲ್ಲಣಗೌಡ ಉಕ್ಕಿನಾಳ, ಸಿದ್ಧಾರಡ್ಡಿ ಬಲಕಲ್ ಉಪಸ್ಥಿತರಿದ್ದರು. ಮಲ್ಲಿಕಾರ್ಜುನ ಕಂದಕೂರ, ಮಲ್ಲಿಕಾರ್ಜುನ ಗಂಗಾಧರಮಠ ಸೇರಿದಂತೆ ಇತರರಿದ್ದರು. ಅಪಾರ ಸಂಖ್ಯೆಂiÀiಲ್ಲಿ ಜಿಲ್ಲೆಯ ಕಾರ್ಯಕರ್ತರು ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಗುರುವಾರ ಕನಕದಾಸ ಜಯಂತಿ ನಿಮಿತ್ತ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಮಾರ್ಲಾಪಣೆ ಮಾಡಿ ಪೂಜೆ ಸಲ್ಲಿಸಲಾಯಿತು.

ತ್ಯಾಗ, ತಾಳ್ಮೆ ಮತ್ತು ಶ್ರಮ ಉನ್ನತಮಟ್ಟಕ್ಕೆ ಕರೆದೊಯ್ಯಲಿವೆ- ರಾಜೂಗೌಡ ಕಿವಿ ಮಾತು

ಯಾರು ಪಕ್ಷಕ್ಕಾಗಿ ತ್ಯಾಗ, ತಾಳ್ಮೆಯೊಂದಿಗೆ ಪ್ರಾಮಾಣಿಕವಾಗಿ ದುಡಿಯುತ್ತಿರೋ ಅವರಿಗೆ ಬರುವ ಕಾಲದಲ್ಲಿ ಉತ್ತಮ ಅವಕಾಶ ಲಭಿಸಲಿದೆ. ಇದನ್ನು ಅರ್ಥೈಸಿಕೊಂಡು ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡುವ ಮೂಲಕ ಗ್ರಾಪಂ ಅಧಿಕಾರ ಪಡೆಯುವಲ್ಲಿ ಯಶಸ್ವಿಯಾಗಬೇಕೆಂದು ಶಾಸಕ ರಾಜೂಗೌಡ ಕರೆ ನೀಡಿದರು.

ಉದಾಹರಣೆಗೆ ಕಳೆದ ಬಾರಿ ಗ್ರಾಪಂ ಚುನಾವಣೆ ಒಂದು ಕ್ಷೇತ್ರಕ್ಕೆ ಇಬ್ಬರಲ್ಲಿ ಪೈಪೋಟಿ ನಡೆಯಿತು. ಓರ್ವರಿಗೆ ನಾನು ನೀನು ಸ್ಪರ್ಧೆ ಮಾಡುವದು ಬೇಡವೆಂದು ತಿಳಿಸಿ ಹೇಳಿದೆ ಆ ಮನುಷ್ಯ ಒಂದೇ ಮಾತಿಗೆ ಆಯಿತು ಅಣ್ಣಾ ನೀನು ಹೇಗೆ ಹೇಳಿತಿಯಾ ಹಾಗೇ ಎಂದು ಪಂಚಾಯತ್ ಚುನಾವಣೆಯಲ್ಲಿ ಕೆಲಸ ಮಾಡಿದ.

ಎಲೆಕ್ಷನ್ ಮುಗೀತು ಅದಾದ ನಂತರ ತಾಲೂಕು ಪಂಚಾಯತ್ ಚುನಾವಣೆ ಎದುರಾಯಿತು ಮೀಸಲಾತಿ ಪ್ರಕಟವಾಯಿತು ತಾಪಂ ಕ್ಷೇತ್ರವೊಂದಕ್ಕೆ ಅದೇ ಮನುಷ್ಯನನ್ನ ಕರೆದು ನಾನು ನಿಲ್ಲಿಸಿದೆ ಆಗ ತಾಲೂಕು ಪಂಚಾಯತ್ ಸದಸ್ಯನಾಗಿ ಆಯ್ಕೆಯಾದ. ಇಂತಹ ಘಟನೆಗಳು ಸಾಕಷ್ಟಿವೆ. ಹೀಗಾಗಿ ಕಾರ್ಯಕರ್ತರಲ್ಲಿ ತ್ಯಾಗ, ತಾಳ್ಮೆ ಮತ್ತು ಪಕ್ಷದ ಸಂಘಟನೆಗಾಗಿ ಪ್ರಾಮಾಣಿಕ ಶ್ರಮವಿರಲಿ ಅದು ಎಂದಿಗೂ ನಿಮ್ಮನ್ನು ಕೈಬಿಡುವದಿಲ್ಲ ಎಂದು ಕಿವಿ ಮಾತು ಹೆಳಿದರು.

Related Articles

Leave a Reply

Your email address will not be published. Required fields are marked *

Back to top button