ಪ್ರಮುಖ ಸುದ್ದಿ
ಪ್ರಧಾನಿ ಜನ್ಮ ದಿನಃ ಬಿಜೆಪಿಯಿಂದ ಸೇವಾ ಸಪ್ತಾಹ ಆಚರಣೆ
ಪ್ರಧಾನಿ ಜನ್ಮ ದಿನಃ ಹಣ್ಣು ಹಂಪಲು ವಿತರಣೆ
ಯಾದಗಿರಿಃ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವನ್ನು ಸೇವಾ ಸಪ್ತಾಹ ಕಾರ್ಯಕ್ರಮವನ್ನಾಗಿ ಬಿಜೆಪಿ ಆಚರಿಸುತ್ತಿದೆ.
ಇಂದು ನಗರದಲ್ಲಿ ಜಿಲ್ಲಾ ಬಿಜೆಪಿ ಎಸ್.ಸಿ.ಮೋರ್ಚಾವತಿಯಿಂದ ಮೋದಿಯವರ ಜನ್ಮ ದಿನದಂಗವಾಗಿ ಸೇವಾ ಸಪ್ತಾಹ ಕಾರ್ಯಕ್ರಮವನ್ನು ಇಲ್ಲಿನ ಶ್ರೀಶೈಲ ಮಲ್ಲಿಕಾರ್ಜುನ ಅನಾಥಾಶ್ರಮದಲ್ಲಿ ಮಕ್ಕಳಿಗೆ ಹಣ್ಣು ಹಂಪಲು, ಹಾಲು ಬ್ರೆಡ್ ವಿತರಿಸುವ ಮೂಲಕ ಆಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಎಸ್.ಸಿ.ಮೋರ್ಚಾ ಅಧ್ಯಕ್ಷ ಭೀಮಾಶಂಕರ ಬಿಲ್ಲವ್, ಜಿಲ್ಲಾ ಬಿಜೆಪಿ ಜನರಲ್ ಸೆಕರೆಟ್ರಿ ಗುರು ಕಾಮಾ, ಎಸ್.ಸಿ. ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಹರ್ ಖೇಮು ಪವರ್, ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಕಂದಕೂರ, ಶಹಾಪುರ ನಗರ ಬಿಜೆಪಿ ವೀರೇಶ್ ಅಡಕಿ, ನಗರ ಎಸ್.ಸಿ.ಮೋರ್ಚಾ ಅಧ್ಯಕ್ಷ ಬಸವರಾಜ ಕಣೆಕಲ್, ನಗರ ಕಾರ್ಯದರ್ಶಿ ಭೀಮಾಶಂಕರ ಕಟ್ಟಿಮನಿ, ಮಲ್ಲಿಕಾರ್ಜುನ ಮ್ಯಾಗೇರಿ, ಮಾಜಿ ಶಾಸಕ ಗುರು ಪಾಟೀಲ್ ರ ಆಪ್ತ ಸಹಾಯಕ ಶಕೀಲ್ ಮುಲ್ಲಾ ಇತರರಿದ್ದರು.