ಪ್ರಮುಖ ಸುದ್ದಿ

ಯುವ ನಾಯಕ‌ ತೇಜಸ್ವಿ ಮೇಲೆ ಹಲ್ಲೆ ಯತ್ನಕ್ಕೆ ಬಿಜೆಪಿ ಖಂಡನೆ

ಯುವ ನಾಯಕ‌ ತೇಜಸ್ವಿ ಮೇಲೆ ಹಲ್ಲೆ ಯತ್ನಕ್ಕೆ ಬಿಜೆಪಿ ಖಂಡನೆ

ಶಹಾಪುರಃ ಪಶ್ಚಿಮ ಬಂಗಾಳದಲ್ಲಿ ನಿರಂತರ ಹಿಂದೂಗಳ‌‌ ಕಗ್ಗೊಲೆ, ದೌರ್ಜನ್ಯ ಖಂಡಿಸಿ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ, ಕನ್ನಡಿಗ ತೇಜಸ್ವಿ ಸೂರ್ಯ ಕರೆ ಕೊಟ್ಟಿದ್ದ ನಬನ್ನಾ ಚಲೋ ಹೋರಾಟಕ್ಕೆ ಬಂಗಾಲದ ಸಿಎಂ ಮಮತಾ ದೀದಿ ಬೆಚ್ಚಿ‌ ಬಿದ್ದಿದ್ದು, ಓರ್ವ ಹೋರಾಟಗಾರನ ಮೇಲೆ ಹಲ್ಲೆ ಯತ್ನ ನಡೆಸುವ ಮೂಲಕ‌ ಹೋರಾಟ ಹತ್ತಿಕ್ಕುವ ಕೆಲಸ‌ ಮಾಡುತ್ತಿರುವದು ದೀದಿಗೆ ಶೋಭೆ ತರುವಂತದ್ದಲ್ಲ ಎಂದು ಬಿಜೆಪಿ ನಗರ ಮಂಡಲ ಕಾರ್ಯದರ್ಶಿ ಭೀಮಾಶಂಕರ ಕಟ್ಟಿಮನಿ ಹಳಿಸಗರ ತಿಳಿಸಿದ್ದಾರೆ.

ಬಂಗಾಲದಲ್ಲಿ ಒಲೈಕೆ ರಾಜಕಾರಣದಿಂದ ಒಂದು ಸಮುದಾಯದ ಮೇಲೆ ನಿರಂತರ ದೌರ್ಜನ್ಯ, ಕೊಲೆ, ಹಲ್ಲೆ ಮಾನಭಂಗ ಘಟನೆಗಳು ನಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಬಿಜೆಪಿ ರಾಷ್ಟ್ರೀಯ ಯುವ ನಾಯಕ ತೇಜಸ್ವಿ ಸೂರ್ಯ ಶೋಷಿತರ ಪರವಾಗಿ‌ ದೌರ್ಜನ್ಯಕ್ಕೊಳಗಾದ ಮುಗ್ಧ ಜನರ‌ ಬೆಂಬಲವಾಗಿ‌ ನಿಂತು ನ್ಯಾಯಪರ‌ ಹೋರಾಟ‌ ಮಾಡುತ್ತಿದ್ದು, ನಾವೆಲ್ಲ ಸ್ಪಂಧಿಸ ಬೇಕಿದೆ.

ಆ ನಿಟ್ಟಿನಲ್ಲಿ‌ ತೇಜಸ್ವಿ ಸೂರ್ಯ ಅವರ ಹೋರಾಟ ಯಶಸ್ವಿಯಾಗಲಿ ಅಲ್ಲಿನ ಶೋಷಿತರು, ದೌರ್ಜನ್ಯ ಕ್ಕೊಳಪಟ್ಟ ಮುಗ್ಧ‌ ಅಸಹಾಯಕರಿಗೆ ನ್ಯಾಯ ದೊರೆಯಲಿ. ಯಾರೇ ಆಗಿರಲಿ‌ ಒಂದು ಮಾನವ ಕುಲ ಸಂಕಷ್ಟಕ್ಕೀಡು‌ ಮಾಡುವದು ಇನ್ನೊಂದು ಮಾನವ ಸಮುದಾಯದ ನೀತಿ‌ ಅಲ್ಲ.
ಪಕ್ಷಿಗಳು, ಕಾಡು ಪ್ರಾಣಿಗಳು ಎಷ್ಟೋ ವಾಸಿ‌ ಅನಿಸುತ್ತದೆ.

ನ್ಯಾಯಪರವಾದ ಹೋರಾಟ ಯಾರೇ ಮಾಡಲಿ ಯಾವುದೇ ಆಗಲಿ ಜನಪರ ಹಿತ,‌ ಕಾಳಜಿ ನ್ಯಾಯಪರತೆಗೆ ಜಯವಾಗಲಿ ಎಂದು ಅವರು‌ ತಿಳಿಸಿದ್ದಾರೆ.

ಅಲ್ಲದೆ ಬಂಗಾಲದಲ್ಲಿ ಹೀಗೆ‌ ಒಂದು ಸಮುದಾಯ ಗುರಿ ಇಟ್ಟು ದೌರ್ಜನ್ಯ ಮುಂದುವರೆದಲ್ಲಿ ಮುಂದೆ ಅದರ ಪರಿಣಾಮ ದೀದಿ ಎದುರಿಸಬೇಕಾಗುತ್ತದೆ ಎಂದು ಅವರು‌‌ ಎಚ್ಚರಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button