ಷರತ್ತು ರಹಿತವಾಗಿ ಬಿಜೆಪಿಗೆ ಯಾಳಗಿ- ದೇವು ಕೋನೇರ್ ಹೇಳಿಕೆ
ಷರತ್ತು ರಹಿತವಾಗಿ ಬಿಜೆಪಿಗೆ ಯಾಳಗಿ- ಕೋನೇರ್ ಹೇಳಿಕೆ
ಶಹಾಪುರಃ ಅಮೀನರಡ್ಡಿ ಯಾಳಗಿ ಅವರು ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಆದರೆ ಯಾವುದೇ ಷರತ್ತು ಹಾಕದೆ ಷರತ್ತು ರಹಿತವಾಗಿ ಬಿಜೆಪಿ ತತ್ವ ಸಿದ್ಧಾಂತ ಒಪ್ಪಿಕೊಂಡು ಅವರು ಬಿಜೆಪಿಗೆ ಬರುತ್ತಿದ್ದಾರೆ. ಅವರಿಗೆ ಪಕ್ಷದಿಂದ ಸ್ವಾಗತಿಸಲಾಗುತ್ತದೆ ಎಂದು ಬಿಜೆಪಿ ನಗರ ಘಟಕ ಅಧ್ಯಕ್ಷ ದೇವಿಂದ್ರಪ್ಪ ಕೋನೇರ ತಿಳಿಸಿದ್ದಾರೆ.
ಪಕ್ಷದ ಸಿದ್ಧಾಂತ ಒಪ್ಪಿ ಯಾರೇ ಪಕ್ಷಕ್ಕೆ ಬಂದರೆ ಸ್ವಾಗತವಿದೆ. ನಮ್ಮಲ್ಲಿ ವ್ಯಕ್ತಿಗಿಂತ ಪಕ್ಷದೊಡ್ಡದು. ಯಾಳಗಿ ಅವರು ಬಿಜೆಪಿಗೆ ಬರುವದರಿಂದ ಪಕ್ಷ ಸಂಘಟನಾತ್ಮಕವಾಗಿ ಇನ್ನಷ್ಟು ಬಲವಾಗಲಿದೆ.
ಯಾಳಗಿ ಅವರು ಪಕ್ಷದಲ್ಲಿ ಮೊದಲು ಕಾರ್ಯಕರ್ತರಾಗಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಿದ್ದು, ಪಕ್ಷಕ್ಕಾಗಿ ದುಡಿಯುವ ಪ್ರತಿಯೊಬ್ಬರಿಗೂ ಉತ್ತಮ ಅವಕಾಶವಿದೆ.
ಪಕ್ಷಕ್ಕಾಗಿ ದುಡಿದವರನ್ನು ನಮ್ಮ ಪಕ್ಷ ಮರೆಯುವದಿಲ್ಲ. ಅವರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ದೇಶ ಸೇವೆಯೇ ಈಶ ಸೇವೆ ಎಂಬ ನಡೆಯಲ್ಲಿ ಕಾರ್ಯಕರ್ತರು ಶ್ರಮಿಸುತ್ತಾರೆ. ಆ ನಿಟ್ಟಿನಲ್ಲಿ ಯಾಳಗಿ ಅವರು ಸಹ ಪಕ್ಷ ಸಂಘಟನೆಯಲ್ಲಿ ತಮ್ಮ ಶಕ್ತಿಯನ್ನು ಹಾಕಲಿದ್ದಾರೆ.
ಅವರಿಂದ ಪಕ್ಷ ಇನ್ನಷ್ಟು ಬಲಾಢ್ಯವಾಗಿ ಹೊರಹೊಮ್ಮಲಿದೆ. ಮಾಜಿ ಶಾಸಕರ ಕೈ ಬಲಪಡಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ದೇಶದ ಅಭಿವೃದ್ಧಿಗೆ ಮಾರಕವಾದ ಕಾಂಗ್ರೆಸ್ ನ್ನು ಸದೆ ಬಡೆಯಬೇಕಿದೆ. ಸದಾ ದೇಶದ ಅಭಿವೃದ್ಧಿ ಚಿಂತನೆಯಲ್ಲಿ ಕೆಲಸ ಮಾಡುವ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕಿದೆ ಎಂದಿದ್ದಾರೆ.
ಅಮೀನರಡ್ಡಿ ಅವರು ಜೆಡಿಎಸ್ ತೊರೆದು ಬಿಜೆಪಿ ಸೇರಲಿದ್ದು, ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಇಷ್ಟರಲ್ಲಿ ಬಿಜೆಪಿ ಸೇರಿದ ಗಳಿಗೆಯಲ್ಲಿ ಅವರು ತಮ್ಮ ಸ್ಪಷ್ಟ ನಿಲುವು ತಿಳಿಸಿದ್ದಾರೆ.