ಪ್ರಮುಖ ಸುದ್ದಿ
ಮುಂಬೈನಲ್ಲಿರುವ ಶಾಸಕರನ್ನು ಬಿಜೆಪಿಗೆ ಸೇರಿಸಲ್ಲ ಅಂತ ಹೇಳಿ ಈಗಲೇ ವಿಶ್ವಾಸ ಮತಕ್ಕೆ ಹೋಗುವ!
ಬೆಂಗಳೂರು: ವಿಶ್ವಾಸ ಮತ ಸಾಬೀತು ಪ್ರಕ್ರಿಯೆ ಬಗ್ಗೆ ಚರ್ಚೆ ವೇಳೆ ಬಿಜೆಪಿ ಹಾಗೂ ದೋಸ್ತಿ ಪಕ್ಷಗಳ ಶಾಸಕರ ನಡುವೆ ತೀವ್ರ ವಾಗ್ವಾದ ಮುಂದುವರೆದಿದೆ. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವರು ಮುಂಬೈಗೆ ತೆರಳಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಬಿಜೆಪಿಗೆ ಸೇರಿಸಿಕೊಳ್ಳಲ್ಲ ಎಂದು ವಿಪಕ್ಷ ನಾಯಕರು ಸದನಕ್ಕೆ ಹೇಳಲಿ. ಈಗಲೇ ವಿಶ್ವಾಸ ಮತಕ್ಕೆ ಹೋಗುತ್ತೇವೆ ಎಂದು ಸವಾಲು ಎಸೆದರು.
ಶಿವಲಿಂಗೇಗೌಡರ ಸವಾಲಿಗೆ ಉತ್ತರಿಸಿದ ಬಿಜೆಪಿ ಶಾಸಕ ಮಾಧುಸ್ವಾಮಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ಹಕ್ಕಿವೆ. ಶಾಸಕರಾದವರು ರಾಜೀನಾಮೆ ನೀಡಿದ ಬಳಿಕ ಯಾವ ಪಕ್ಷಕ್ಕೆ ಬೇಕಾದರೂ ಹೋಗಬಹುದು. ಹಾಗೇ ನೋಡಿದರೆ ನಿಮ್ಮ ಪಕ್ಷಗಳಲ್ಲಿರುವ ಅನೇಕ ನಾಯಕರು ಈವತ್ತು ಎಲ್ಲಿರಬೇಕಿತ್ತು ಯೋಚಿಸಿ ಎಂದು ಸಚಿವ ಆರ್.ವಿ.ದೇಶಪಾಂಡೆ, ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಉದಾಹರಣೆ ನೀಡಿದರು.