ಪ್ರಮುಖ ಸುದ್ದಿ

ಕಾಗೆ ಅಂದರೆ ಕಪ್ಪು ಅಂತ ಹೀಗಳೆಯಬೇಡಿ! ಯಾಕೆಂದರೆ…

ಆಸ್ಪತ್ರೆಯ ಆವರಣದಲ್ಲಿ ಬೀಡುಬಿಟ್ಟಿರುವ ವಿಶೇಷ ಕಾಗೆ!

ಮೈಸೂರು: ನಗರದ ಕೆ.ಆರ್ ಆಸ್ಪತ್ರೆಯ ಆವರಣದಲ್ಲಿ ಕೆಲ ದಿನಗಳಿಂದ ಕಾಣಿಸಿಕೊಂಡಿರುವ ಕಾಗೆಯೊಂದು ಎಲ್ಲರ ಗಮನ ಸೆಳೆಯುತ್ತದೆ. ಯಾಕೆಂದರೆ, ಆ ಕಾಗೆ ಎಲ್ಲಾ ಕಾಗೆಗಳಂತೆ ಬ್ಲಾಕಿ ಆಗಿಲ್ಲ. ಬದಲಾಗಿ ರೆಕ್ಕೆ ಮತ್ತು ಕೊರಳು ಭಾಗದಲ್ಲಿ ಬಿಳಿ ಬಣ್ಣ ಹೊಂದಿದೆ. ಹೀಗಾಗಿ, ಕಾಗೆಗಳೊಂದಿಗೆ ಕಾಣಿಸಿಕೊಳ್ಳುತ್ತಿರುವ ವಿಶಿಷ್ಟವಾದ ಬ್ಲಾಕ್ & ವೈಟ್ ಕಾಗೆ ಕಂಡವರು ಚಕಿತರಾಗುತ್ತಿದ್ದಾರೆ. ಇದು ಕಾಗೆ ಹೌದೋ ಅಲ್ವೋ ಅಂತ ಜೊತೆಗಿರೋರನ್ನು ಕೇಳಿ ಮತ್ತೊಮ್ಮೆ ಕನಫರ್ಮ್ ಮಾಡಿಕೊಳ್ಳುತ್ತಿದ್ದಾರೆ.

ಜೀನ್ ವ್ಯತ್ಯಾಸದಿಂದಾಗಿ ಕಾಗೆಯ ಬಣ್ಣದಲ್ಲಿ ಈ ರೀತಿಯ ವ್ಯತ್ಯಾಸ ಆಗಿರಬಹುದು. ಕಾಗೆ ಸೇರಿದಂತೆ ವಿವಿಧ ಪಕ್ಷಿ ಸಂಕುಲದಲ್ಲಿ ಈ ರೀತಿಯ ವ್ಯತ್ಯಾಸಗಳು ಕಂಡು ಬರುತ್ತವೆ ಎಂದು ಪಕ್ಷಿ ತಜ್ಞರು ಅಭಿಪ್ರಾಯ ಪಡುತ್ತಾರೆ. ಅದೇನೇ ಇರಲಿ ಸಂಕಷ್ಟದಲ್ಲಿ ಕೆ.ಆರ್. ಆಸ್ಪತ್ರೆಗೆ ಬಂದಿರುವ ಜನ ಈ ಕಾಗೆಯನ್ನು ಕಂಡಾಗ ಒಂದು ಕ್ಷಣ ತಮ್ಮ ನೋವು ಮರೆತು ಈ ಬ್ಲಾಕ್ & ವೈಟ್ ಕಾಗೆಯತ್ತ ಚಿತ್ತ ಹರಿಸುವುದಂತು ನಿಜ.

Related Articles

Leave a Reply

Your email address will not be published. Required fields are marked *

Back to top button