Home
ಬಿಜೆಪಿ MLA ತೇಲ್ಕರ್ ವಿರುದ್ಧ ಮಹಿಳೆ ಆರೋಪ ಆಯುಕ್ತರಿಗೆ ದೂರು
BREAKING NEWS – ಮಹಿಳೆಯಿಂದ ಬ್ಲಾಕ್ ಮೇಲ್ ಫೆ.5 ರಂದೇ ಠಾಣೆಗೆ ದೂರು ನೀಡಿದ ಶಾಸಕ ತೇಲ್ಕರ್
ಬಿಜೆಪಿ MLA ತೇಲ್ಕರ್ ವಿರುದ್ಧ ಮಹಿಳೆ ಆರೋಪ ಆಯುಕ್ತರಿಗೆ ದೂರು
ಬೆಂಗಳೂರಃ ಕಲ್ಬುರ್ಗಿ ಜಿಲ್ಲೆಯ ಸೇಂಡಂ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಶಾಸಕ ರಾಜಕುಮಾರ ತೇಲ್ಕರ್ ವಿರುದ್ಧ ಮಹಿಳೆಯೋರ್ವಳು ಲೈಂಗಿಕತೆಗೆ ಬಳಸಿಕೊಂಡಿರುವ ಹಿನ್ನೆಲೆ ತನಗೆ ಜನಿಸಿರುವ 14 ವರ್ಷದ ಗಂಡು ಮಗು ತೇಲ್ಕರ್ ಅವರದ್ದೆ ಆಗಿದ್ದು, ಅದನ್ನು ತೇಲ್ಕರ್ ಅವರು ಒಪ್ಪಿಕೊಳ್ಳಬೇಕೆಂದು ಬೆಂಗಳೂರಿನ ಪೊಲೀಸ್ ಹೆಚ್ಚುವರಿ ಕಮಿಷನರ್ ಅವರಿಗೆ ದೂರು ಸಲ್ಲಿಸಿದ ಘಟನೆ ನಡೆದಿದೆ.
ಆದರೆ ಇದಕ್ಕೆ ಒಪ್ಪದ ಶಾಸಕ ರಾಜಕುಮಾರ ತೇಲ್ಕರ್ ನನ್ನ ವಿರುದ್ಧ ಸುಖಾಸುಮ್ಮನೆ ಆರೋಪ ಮಾಡುತ್ತಿದ್ದು, ಅಲ್ಲದೆ ಬ್ಲಾಕ್ ಮೇಲ್ ಮಾಡುತ್ತಿದ್ದು, 2 ಕೋಟಿ ಬೇಡಿಕೆ ಇಟ್ಟಿದ್ದಾಳೆ ಈ ಕುರಿತು ಬೆಂಗಳೂರಿನ ಪೊಲೀಸ್ ಠಾಣೆಯೊಂದರಲ್ಲಿ ಇದೇ ಫೆ.5 ರಂದು ದೂರು ಸಲ್ಲಿಸಿದ್ದೇನೆ ಎಂದು ತೇಲ್ಕರ್ ತಿಳಿಸಿದ್ದಾರೆ.