ಪ್ರಮುಖ ಸುದ್ದಿ
ನಟೋರಿಯಸ್ ಕ್ರಿಮಿನಲ್ ಬಾಂಬೆ ಸಲೀಂ ಬಂಧನ!
ಬೆಂಗಳೂರು: ಖಚಿತ ಮಾಹಿತಿ ಮೇರೆಗೆ ಇಂದಿರಾನಗರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ನಟೋರಿಯಸ್ ಕ್ರಿಮಿನಲ್ ಬಾಂಬೆ ಸಲೀಂ ನನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ. ಸುಮಾರು 40 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸಲೀಂ ವಿವಿಧ ಠಾಣೆಗಳಲ್ಲಿ ವಾಂಟೆಂಡ್ ಲೀಸ್ಟ್ ನಲ್ಲಿದ್ದ. ಆದರೆ, ಅನೇಕ ಸಲ ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸಿ ಎಸ್ಕೇಪ್ ಆಗಿದ್ದನು. ತನ್ನ ಕೃತ್ಯವನ್ನು ಮಾತ್ರ ನಿಲ್ಲಿಸಿರಲಿಲ್ಲ. ಕೆಲವು ಸಲ ಜೈಲಿನಲ್ಲಿದ್ದುಕೊಂಡೇ ಸಹಚರರ ಮೂಲಕ ಮನೆಗಳ್ಳತನ ಮಾಡಿಸಿದ್ದ. ಹೀಗಾಗಿ, 37 ಕ್ಕೂ ಹೆಚ್ಚು ಮನೆಗಳ್ಳತನ, 3 ಕೊಲೆ ಪ್ರಕರಣದ ಆರೋಪ ಬಾಂಬೆ ಸಲೀಂ ಮೇಲಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ರಾಜಾಜಿನಗರ, ಪೀಣ್ಯ, ರಾಜಗೋಪಾಲನಗರ ಸೇರಿದಂತೆ ವಿವಿಧ ಠಾಣೆಗಳಲ್ಲಿ ಸಲೀಂ ವಿರುದ್ಧ ಕೇಸುಗಳಿವೆ. ಅನೇಕ ದಿನಗಳಿಂದ ಪೊಲೀಸರಿಗೆ ಬೇಕಾಗಿದ್ದ ಸಲೀಂ ಈವರೆಗೆ ಕೈಗೆ ಸಿಗದೆ ಪೊಲೀಸರಿಗೆ ತಲೆನೋವಾಗಿದ್ದ. ಕೊನೆಗೂ ಇಂದಿರಾ ನಗರ ಠಾಣೆಯ ಪೊಲೀಸರು ಕುಖ್ಯಾತ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.