ಪ್ರಮುಖ ಸುದ್ದಿ
ಈಡಿಗ ಸಮಾಜದ 26 ಉಪಜಾತಿ ಒಳಗೊಂಡು ನಾರಾಯಣಗುರು ನಿಗಮ ಸ್ಥಾಪನೆಗೆ ಮನವಿ
ನಾರಾಯಣಗುರು ನಿಗಮ ಸ್ಥಾಪನೆಗೆ ಮನವಿ

ಬೆಂಗಳೂರಃ ಈಡಿಗ ಸಮಾಜದ 26 ಉಪಜಾತಿಗಳನ್ನು ಒಳಗೊಂಡು ಸಮಾಜದ ಅಭಿವೃದ್ಧಿಗೆ ನಾರಾಯಣ ಗುರು ಬ್ರಹ್ಮರ್ಷಿ ಹೆಸರಲ್ಲಿ ನಿಗಮ ಸ್ಥಾಪನೆಗೆ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಮುಜರಾಯಿ ಮತ್ತು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಭಾನುವಾರ ಬ್ರಹ್ಮಶ್ರೀ ನಾರಾಯಣ ಗುರು ಧರ್ನ ಪರಿಪಾಲನಾ ಸಂಘದಿಂದ ಆಯೋಜಿಸಿದ್ದ ನಾರಾಯಣ ಗುರು ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಮುದಾಯದ ಅಭಿವೃದ್ಧಿಗೆ ನಿಗಮ ಸ್ಥಾಪನೆ ಅಗತ್ಯವಿದೆ. ನಮ್ಮ ಸಮುದಾಯದವರು ಸರ್ಕಾರಿ ಕೆಲಸ ಅರಸಿ ಹೋಗುವದಿಲ್ಲ. ಶ್ರಮವಹಿಸಿ ದುಡಿಮೆ ಮೂಲಕ ಜೀವನ ಕಟ್ಟಿಕೊಳ್ಳುತ್ತಾರೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಪರಿವರ್ತನಶ್ರೀ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.