ಬೂದನೂರ ಕೊಲೆ ಪ್ರಕರಣಃ ಆರೋಪಿಗಳಿಬ್ಬರ ಬಂಧನ
ಬೂದನೂರ ಪ್ರಕರಣಃ ಆರೋಪಿಗಳ ಬಂಧನ
ಯಾದಗಿರಿ, ಶಹಾಪುರಃ ಇತ್ತೀಚೆಗೆ ತಾಲೂಕಿನ ಬೂದನೂರ ಗ್ರಾಮದಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಬ್ಬರನ್ನು ಪೊಲೀಸರು ಮಂಗಳವಾರ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ತಾಲೂಕಿನ ಬೂದನೂರ ಗ್ರಾಮದಲ್ಲಿ ರಾತ್ರಿ ವೇಳೆ ಮಲ್ಲಿಕಾರ್ಜುನ ನಾಟೇಕಾರ(34) ಎಂಬ ವ್ಯಕ್ತಿಯೋರ್ವನನ್ನು ಕೊಲೆ ಮಾಡಲಾಗಿತ್ತು.
ಕೊಲೆಯಾದ ವ್ಯಕ್ತಿಯ ಸಹೋದರ ಮಹಾದೇವಪ್ಪ ನಾಟೇಕಾರ ಸಾ.ಖಾನಾಪುರ ಈತ ತನ್ನ ಸಹೋದರ ಮಲ್ಲಿಕಾರ್ಜುನನ್ನು ದುಷ್ಕರ್ಮಿಗಳು ಕೊಲೆಗೈದಿದ್ದಾರೆ. ಕೂಡಲೇ ಕೊಲೆ ಮಾಡಿದ ದುಷ್ಕರ್ಮಿಗಳನ್ನು ಬಂಧಿಸಿ ಕಾನೂನಾತ್ಮಕ ಶಿಕ್ಷೆ ಒದಗಿಸಬೇಕೆಂದು ದೂರಿನಲ್ಲಿ ಕೇಳಿಕೊಂಡಿದ್ದ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಸುರಪುರ ಡಿವೈಎಸ್ ಅವರ ಮಾರ್ಗದರ್ಶನದಲ್ಲಿ ಗ್ರಾಮೀಣ ಠಾಣೆಯ ಸಿಪಿಐ ಮಹ್ಮದ್ ಸಿರಾಜುದ್ದೀನ್ ನೇತೃತ್ವದ ಪೊಲೀಸ್ ತಂಡ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.
ಆರೋಪಿಗಳಾದ ರಾಘುನಾಯಕ ನಾಯಿಕೋಡಿ ಸಾ.ಟಿಬಮ್ಮನಳ್ಳಿ, ರಮೇಶ ಹಡಗಿನಾಳ ಸಾ.ಕುದರಿಸಾಲವಾಡಿ ವಿಜಯಪುರ ಜಿಲ್ಲೆಯವನು ಎನ್ನಲಾಗಿದೆ. ಆರೋಪಿ ರಮೇಶ ಎಂಬಾತನಿಗೆ 17 ವರ್ಷವಿರುವ ಕಾರಣ ಈತನನ್ನು ದಸ್ತಗಿರಿ ಮಾಡಲಾಗಿದ್ದು, ಅಪ್ರಾಪ್ತ ಬಾಲಕನಾಗಿದ್ದು, ಆತನಿಗೆ ಕಾನೂನಿನ್ವಯ ಆತನನ್ನು ಬೇರಡೆ ಮಕ್ಕಳ ಜೈಲಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ.
ಕೊಲೆಗೆ ಕಾರಣ ಅನೈತಿಕ ಸಂಬಂಧವೆಂದು ಆರೋಪಿತರು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿತರನ್ನು ಬಂಧಿಸುವಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಗೋಗಿ ಠಾಣೆಯ ಪಿಎಸ್‍ಐ ಸುರೇಶ ಬಾಬು ಹಾಗೂ ಪೊಲೀಸ್ ಸಿಬ್ಬಂದಿಗಳಾದ ರಾಮಲಿಂಗಯ್ಯ, ಶ್ರೀಶೈಲ್ ಸಜ್ಜನ್, ಮಾಯಪ್ಪ, ಮಾಳಪ್ಪ, ಮಲ್ಲಿಕಾರ್ಜುನ, ರಮೇಶ, ಮಲಕಾರಿ, ಪ್ರೇಮಸಿಂಗ್ ಸೇರಿದಂತೆ ಇತರರಿದ್ದರು.