ಮಹಿಳಾ ವಾಣಿ

ಹೆದ್ದಾರಿ ಮೇಲೆ ಹೆತ್ತ ಮಗುವನ್ನು ಬಿಟ್ಟು ಹೋದ ಕಲ್ಲು ಹೃದಯಿ ಯಾರು?

ತುಮಕೂರು : ಜಿಲ್ಲೆಯ ಸಿರಾ ಪಟ್ಟಣದ ಸಮೀಪದ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ರಸ್ತೆ ಬದಿಯಲ್ಲಿ ನವಜಾತ ಗಂಡು ಶಿಶು ಪತ್ತೆಯಾಗಿದೆ. ಮಗುವಿನ ಅಳುವಿನ ದನಿ ಕೇಳಿ ಸ್ಥಳೀಯರು ಮಗುವನ್ನು ರಕ್ಷಿಸಿದ್ದಾರೆ. ಸಿರಾ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಮುದ್ದು ಮಗುವನ್ನು ಕಂಡ ಪ್ರತಿಯೊಬ್ಬರಲ್ಲೂ ಹೆತ್ತ ಮಗುವನ್ನು ಹೆದ್ದಾರಿ ಮೇಲೆ ಬಿಟ್ಟು ಹೋದ ಕಲ್ಲು ಹೃದಯಿ ಯಾರೆಂಬ  ಪ್ರಶ್ನೆ ಮೂಡಿದೆ.

ಸಿರಾ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿನ ಆರೋಗ್ಯ ತಪಾಸಣೆ ಮಾಡಲಾಗಿದ್ದು ಮಗು ಆರೋಗ್ಯವಾಗಿದೆ ಎಂದು ತಿಳಿದು ಬಂದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಗುವೊನ ಪಾಲನೆ ಪೋಷಣೆ ಬಗ್ಗೆ ಮುಂದಿನ ಕ್ರಮದ ಬಗ್ಗೆ ಚಿಂತನೆ ನಡೆಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button