ಅನ್ನ ಭಾಗ್ಯ ಹೆಸರಲಿ ಖನ್ನ ಭಾಗ್ಯ ನೀಡಿದ ಸರ್ಕಾರ – ಆರ್. ಅಶೋಕ ಆಕ್ರೋಶ
ಬಿಪಿಎಲ್ ಕಾರ್ಡ್ ರದ್ದು – ಬಡವರಿಗೆ ಅನ್ನದ ಬದಲು ಖನ್ನ ಹಾಕಿದ ಕಾಂಗ್ರೆಸ್
ವಿವಿ ಡೆಸ್ಕ್ಃ ರಾಜ್ಯ ಕಾಂಗ್ರೆಸ್ ಸರ್ಕಾರ ಸಿಎಂ ಹೇಳಿಕೆ ಪ್ರಕಾರ 12 ಲಕ್ಷ ಬಿಪಿಎಲ್ ಕಾರ್ಡ್ ರದ್ದು ಪಡಿಸಿದ್ದಾರಂತೆ, ಆದರೆ ಮುನಿಯಪ್ಪ ಅವರ ಹೇಳಿಕೆ ಪ್ರಕಾರ 1 ಲಕ್ಷ ಚಿಲ್ಲರೆ ಕಾರ್ಡ್ ರದ್ದುಪಡಿಸಲಾಗಿದೆಯಂತೆ.
ಇದನ್ನು ನೋಡಿದರೆ ಕಾಂಗ್ರೆಸ್ ಬಡವರಿಗೆ ಅನ್ನ ಭಾಗ್ಯ ನೀಡುವ ಬದಲು ಖನ್ನ ಭಾಗ್ಯ ನೀಡಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರ ವಿರುದ್ಧ ಹರಿಹಾಯ್ದ ಅವರು, ಗ್ಯಾರಂಟಿ ಯೋಜನೆ ಬಳಕೆಗೆ ದುಡ್ಡು ಸಾಲುತ್ತಿಲ್ಲವೆಂಬ ಕಾರಣಕ್ಕೆ ಬಿಪಿಎಲ್ ಕಾರ್ಡ್ ಗಳ ಸಂಖ್ಯೆ ಏಕಾಏಕಿ ನೋಟಿಸ್ ನೀಡದೆ ಬಿಪಿಎಲ್ ಅರ್ಹರ ಕಾರ್ಡು ಸಹ ರದ್ದು ಪಡಿಸಿರುವದು ಸರಿಯಲ್ಲ ಎಂದು ಗುಡುಗಿದರು.
ಅರಸು ಕಾಲೋನಿ ಬಡವರೇ ವಾಸಿಸುವ ಕಾಲೊನಿ ಇಲ್ಲಿ ನೂರಾರು ಮಹಿಳೆಯರ ಬಿಪಿಎಲ್ ಕಾರ್ಡ್ ರದ್ದು ಪಡಿಸಿರುವದು ವಿಪರ್ಯಾಸ. ಕಾಲೊನಿ ಮಹಿಳೆಯರು ಕಣ್ಣೀರಾಕುತ್ತಿದ್ದಾರೆ ಇದರ ಶಾಪ ಸರ್ಕಾರಕ್ಕೆ ತಟ್ಟಲಿದೆ. ಸರ್ಕಾರಿ ನೌಕರರ ಮಾತ್ರ ಬಿಪಿಎಲ್ ಕಾರ್ಡ್ ರದ್ದುಪಡಿಸಲಾಗುವದು ಎಂದು ಹೇಳಿಕೆ ನೀಡುವ ಸಿಎ ಸಿದ್ರಾಮಯ್ಯನವರೇ ಬಡವರ ನಿರ್ಗತಿಕರ ಕಾರ್ಡ್ ರದ್ದು ಪಡಿಸುವದು ಯಾವ ನ್ಯಾಯ ಎಂದು ಆಕ್ರೋಶ ವ್ಯಕ್ತ ಪಡಿಸಿದ ಅವರು, ಸರ್ಕಾರಿ ನೌಕರರು ಸಂಖ್ಯೆ ಎಷ್ಟಿದೆ ಅದರಲ್ಲಿ ಬಿಪಿಎಲ್ ಹೊಂದಿದವರೆಷ್ಟು.? ನೀವು ರದ್ದು ಪಡಿಸಿರುವದೆಷ್ಟು ಎಂದು ಪ್ರಶ್ನೆ ಮಾಡಿದರು.