ಪ್ರಮುಖ ಸುದ್ದಿ

ಶಹಾಪುರಃ ಡಾ.ಮಹರ್ಷಿ ಆನಂದ ಗುರೂಜಿ ಔಪಚಾರಿಕ ಭೇಟಿ ಆಶೀರ್ವಾದ ಪಡೆದ ಭಕ್ತರಲ್ಲಿ ಖುಷಿ

ಶಹಾಪುರದಲ್ಲಿ ಡಾ.ಮಹರ್ಷಿ ಆನಂದ ಗುರೂಜಿ

ಶಹಾಪುರಃ ನಿತ್ಯ ಖಾಸಗಿ ವಾಹಿನಿಯೊಂದರಲ್ಲಿ  ‘ಮಹರ್ಷಿ ದರ್ಪಣ’ ಕಾರ್ಯಕ್ರಮದಲ್ಲಿ ಭವಿಷ್ಯ ವಾಣಿ ನುಡಿಯುವ ಮೂಲಕ ನಾಡಿನಾದ್ಯಂತ ಲಕ್ಷಾಂತರ ಭಕ್ತರನ್ನು ಸಂಪಾದಿಸಿರುವ ಡಾ.ಮಹರ್ಷಿ ಆನಂದ ಗುರೂಜಿಯವರು ಸೋಮವಾರ ನಗರಕ್ಕೆ ಭೇಟಿ ನೀಡಿದ್ದರು. ಬಸವೇಶ್ವರ ವೃತ್ತದಲ್ಲಿ ನೂರಾರು ಜನ ಭಕ್ತರು ಪಟಾಕಿ ಸಿಡಿಸಿ ಹೂವಿನ ಹಾರಗಳನ್ನು ಹಾಕುವ ಮೂಲಕ ಗುರೂಜಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿಕೊಂಡರು.

ನಂತರ ಗಣೇಶ ನಗರದ ನಿವಾಸಿ ಗುರು ಮಣಿಕಂಠ ಅವರ ಮನೆಗೆ ಗುರೂಜಿ ಔಪಚಾರಿಕ ಭೇಟಿ ನೀಡಿದರು. ಮನೆಯಲ್ಲಿ ಪೂಜೆ ಪುನಸ್ಕಾರ ಮುಗಿಸಿಕೊಂಡು ದರ್ಶನ ಪಡೆಯಲು ಬಂದ ಭಕ್ತರಿಗೆ ಗುರೂಜಿ ಆಶೀರ್ವಾದ ಮಾಡಿದರು.

ಇದೇ ಸಂದರ್ಭದಲ್ಲಿ ಹಲವಾರು ಭಕ್ತರ ಸಂಕಷ್ಟಕ್ಕೆ ಪರಿಹಾರ ಸೂಚಿಸುವ ಮೂಲಕ ಗುರೂಜಿ ಅಭಯ ಹಸ್ತ ನೀಡಿದರು. ಕೆಲವರಿಗೆ ಬೆಂಗಳೂರಿನ ಕಚೇರಿಗೆ ಬರಲು ಸೂಚಿಸಿದರು.  ಸಮಗ್ರ ಸಮಸ್ಯೆಗೆ ಉಪಯುಕ್ತ ಸಲಹೆ ನೀಡಬಹುದೆಂದು ತಿಳಿಸಿ ಎಲ್ಲರಿಗೂ ಶುಭವಾಗಲಿ ಎಂದು ಹರಸಿದರು.

ಯಾದಗಿರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಮಾಗನೂರ,  ರವಿ ಮೋಟಗಿ, ಮಲ್ಲಿಕಾರ್ಜುನ ಬುಕಿಸ್ಟಗಾರ, ಮಲ್ಲಿಕಾರ್ಜುನ ಆಲೂರ, ವೀರೇಶ ಅಂಗಡಿ ರಸ್ತಾಪುರ, ರಾಜೂ ಚಿಲ್ಲಾಳ, ಸುರೇಶ ಫಿರಂಗಿ, ರಾಮು ಮಿರ್ಜಿ, ರಾಘವೇಂದ್ರ ಪತ್ತಾರ, ಗೋಶಾಲೆಯ ಸಂಗಮೇಶ ಶಾಸ್ತ್ರೀ ಸೇರಿದಂತೆ ಹಲವರು ಇದ್ದರು. ಮಹಿಳಾ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಗೂರೂಜಿಯವರ ಆಶೀರ್ವಾದ ಪಡೆದುಕೊಂಡರು. ಮಹಿಳಾಮಣಿಗಳು, ಯುವಕ ಯುವತಿಯರು ಉದ್ಯಮಿಗಳು ಗೂರೂಜಿಯಿಂದ ಆಶೀರ್ವಾದ ಪಡೆದು ಸಂಭ್ರಮಿಸಿದರು.

 

Related Articles

Leave a Reply

Your email address will not be published. Required fields are marked *

Back to top button