ಜ.31 ರಂದು ಜೀವನದ ಅದ್ಭುತ ಕ್ಷಣಗಳ ಕುರಿತು ರಾಜಯೋಗಿ ಆತ್ಮಪ್ರಕಾಶರಿಂದ ಪ್ರವಚನ
ಜ.31 ರಂದು ಶಹಾಪುರಕ್ಕೆ ರಾಜಯೋಗಿ ಆತ್ಮಪ್ರಕಾಶ
ಯಾದಗಿರಿಃ ಜಿಲ್ಲೆಯ ಶಹಾಪುರ ಪಟ್ಟಣದ ಬಸವೇಶ್ವರ ನಗರದಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಬುಧವಾರ ಜ.31 ರಂದು ಸಂಜೆ ಜೀವನದ ಅದ್ಭುತ ಕ್ಷಣಗಳು ಎಂಬ ವಿಶೇಷ ಕಾರ್ಯಕ್ರಮ ಜರುಗಲಿದೆ ಸಾರ್ವಜನಿಕರು ಭಾಗವಹಿಸಬೇಕೆಂದು ಬ್ರಹ್ಮಕುಮಾರಿ ವಿಜಯಾ ಅಕ್ಕನವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದ ವಿಶೇಷತೆ ರಾಜಸ್ಥಾನದ ಮೌಂಟಅಬುವಿನಿಂದ ರಾಜಯೋಗಿ ಬ್ರಹ್ಮಕುಮಾರ ಆತ್ಮ ಪ್ರಕಾಶ ಭಾಯಜೀ ಆಗಮಿಸಿಲಿದ್ದು, ವಿಶೇಷ ಉಪನ್ಯಾಸ ನೀಡಲಿದ್ದಾರೆ. ಇಂತಹ ಅತ್ಯಮೂಲ್ಯ ಕಾರ್ಯಕ್ರಮವನ್ನು ಕಳೆದುಕೊಳ್ಳದೆ ಸರ್ವರೂ ಪಾಲ್ಗೊಂಡು ಸದುಪಯೋಗ ಪಡೆದುಕೊಳ್ಳಬೇಕು.
ಬ್ರಹ್ಮಕುಮಾರ ಆತ್ಮ ಪ್ರಕಾಶ ಅವರು ಮೌಂಟು ಅಬುವಿನ ಆರ್‍ಇ ಮತ್ತು ಆರ್‍ಎಫ್‍ನ ಯುವ ಪ್ರಭಾಗದ ಸಂಯೋಜಕರಾಗಿದ್ದಾರೆ. ಅಲ್ಲದೆ ಜರ್ಮನಿ, ಆಫ್ರಿಕಾ, ಬಾಂಗ್ಲಾ, ಆಸ್ಟ್ರೇಲಿಯಾ ಮತ್ತು ಫ್ರಾನ್ಸ್ ಸೇರಿದಂತೆ ಹಲವಾರು ದೇಶಗಳಲ್ಲಿ ಲಕ್ಷಾಂತರ ಜನರಿಗೆ ರಾಜಯೋಗ ಶ್ರೇಷ್ಠ ಅನುಭೂತಿ, ಜೀವನದ ಮೌಲ್ಯಗಳು ಸಕರಾತ್ಮಕ ವಿಚಾರಗಳನ್ನು ತಮ್ಮ ಪ್ರವಚನದ ಮೂಲಕ ತಿಳಿಸಲಿದ್ದಾರೆ.
ಕಾರಣ ಸರ್ವ ಬಂಧುಗಳು ಆಗಮಿಸಿ ಈ ಉತ್ತಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಬದುಕಿನಲ್ಲಿ ಪ್ರೇರಣೆ ಪಡೆಯಬೇಕೆಂದು ಅವರು ತಿಳಿಸಿದ್ದಾರೆ. ಅಲ್ಲದೆ ಕಾರ್ಯಕ್ರಮವನ್ನು ಶಾಸಕ ಗುರು ಪಾಟೀಲ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ನಗರಸಭೆ ಅಧ್ಯಕ್ಷೆ ಕಾಂತಮ್ಮ ಯಕ್ಷಿಂತಿ, ಉಪಾಧ್ಯಕ್ಷ ಬಸವರಾಜ ಇಜೇರಿ ಸೇರಿದಂತೆ ಇತರರು ಉಪಸ್ಥಿತರಿದಲಿದ್ದಾರೆ.