ಪ್ರಮುಖ ಸುದ್ದಿ
BREAKINGಃ ಕೆಪಿಸಿಸಿ ನೂತನ ರಾಜ್ಯಧ್ಯಕ್ಷರಾಗಿ ಡಿಕೆಶಿ ನೇಮಕ
BREAKINGಃ ಕೆಪಿಸಿಸಿ ನೂತನ ರಾಜ್ಯಧ್ಯಕ್ಷರಾಗಿ ಡಿಕೆಶಿ ನೇಮಕ
ಬೆಂಗಳೂರಃ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ (ಕೆಪಿಸಿಸಿ) ರಾಜ್ಯಧ್ಯಕ್ಷರಾಗಿ ಡಿ.ಕೆ.ಶಿವಕುಮಾರರನ್ನು ಕೊನೆಗೂ ಕಾಂಗ್ರೆಸ್ ಹೈಕಮಾಂಡ್ ನೇಮಿಸಿ ಆದೇಶ ಹೊರಡಿಸಿದೆ. ಕೊನೆಗೂ ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ನೂತನ ಸಾರಥ್ಯವನ್ನು ಡಿಕೆಶಿ ಕೊರಳಿಗೆ ಹಾಕಿದೆ.
ಕೆಪಿಸಿಸಿ ಹುದ್ದೆಗೆ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಎಚ್.ಕೆ.ಪಾಟೀಲ್, ಜಿ.ಪರಮೇಶ್ವರ ಸೇರಿದಂತೆ ಹಲವರು ಪೈಪೋಟಿ ನಡೆದಿತ್ತು ಎನ್ನಲಾಗಿದೆ. ಅಂತಿಮವಾಗಿ ತೀವ್ರ ಸ್ಪರ್ಧೆಯಲ್ಲಿದ್ದ ಹುದ್ದೆ ಆಕಾಂಕ್ಷಿ ಡಿಕೆಶಿಗೆ ವಿಜಯದ ಮಾಲೆ ಬಿದ್ದಿದೆ.
ತೆರೆಮರೆಯಲ್ಲಿ ತೀವ್ರ ಕಸರತ್ತು ನಡೆಸಿದ ಹಲವರು ನಿರಾಸೆ ಮೂಡಿದೆ ಎಂದರೆ ತಪ್ಪಿಲ್ಲ. ಎಐಸಿಸಿಯ ಕೆ.ಸಿ.ವೇಣುಗೋಪಾಲ ಕೆಪಿಸಿಸಿ ಅಧ್ಯಕ್ಷಹಾಗಿ ಡಿಕೆಶಿ, ಕಾರ್ಯಧ್ಯಕ್ಷರಾಗಿ ಈಶ್ವರ ಖಂಡ್ರೆ, ಸತೀಶ ಜಾರಕಿಹೊಳಿ ಮತ್ತು ಸಲೀಂ ಅಹ್ಮದ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ.