ಪ್ರಮುಖ ಸುದ್ದಿ
BREAKING – ವಿಶ್ವಕರ್ಮ ಅಭಿವೃದ್ಧಿ ನಿಗಮ ಅಧ್ಯಕ್ಷರ ಬದಲಾವಣೆ.!
ವಿಶ್ವಕರ್ಮ ಅಭಿವೃದ್ಧಿ ಅಧ್ಯಕ್ಷರ ಬದಲಾವಣೆ.!
ಬಾಬು ಪತ್ತಾರ ತೆಗೆದು ಹೊಸ ಅಧ್ಯಕ್ಷರಾಗಿ ಲೋಹಿತ್ ವೈ.ಕಲ್ಲೂರ ನೇಮಿಸಿ ಆದೇಶ
ಬೆಂಗಳೂರಃ ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ಇತ್ತೀಚೆಗೆ ನೇಮಿಸಿದ ಸಿಎಂ ಯಡಿಯೂರಪ್ಪ ಇದೀಗ ದಿಡೀರನೆ ಬದಲಾವಣೆ ಮಾಡಿ ನೂತನವಾಗಿ ಕಲ್ಬುರ್ಗಿಯ ಲೋಹಿತ್ ವೈ.ಕಲ್ಲೂರ ಅವರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.
ದಿಡೀರನೆ ವಿಶ್ವಕರ್ಮ ನಿಗಮದ ಅಧ್ಯಕ್ಷರ ಬದಲಾವಣೆ ಮಾಡಿರುವದು ಸಮುದಾಯದಲ್ಲಿ ಕುತುಹಲ ಕೆರಳಿದ್ದು, ಕೆಲವರು ಆಕ್ರೋಶವು ವ್ಯಕ್ತವಾಗಿದೆ ಎನ್ನಲಾಗಿದೆ.
ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷರ ಏಕಾಏಕಿ ಬದಲಾವಣೆಯಿಂದಾಗಿ ಬಾಬು ಪತ್ತಾರ ಅವರನ್ನು ಅವಮಾನಿಸದಂತಾಗಿದೆ ಎಂದು ಸಮುದಾಯದ ರಾಜ್ಯ ಮುಖಂಡ ಕೆ.ಪಿ.ನಂಜುಂಡಿ ಸೇರಿದಂತೆ ಇತರರು ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ದಿಡೀರ ಬದಲಾವಣೆಗೆ ಕಾರಣವೇನು.? ಇದರ ಒಳಮರ್ಮ ಏನಿದೆ ಎಂಬುದು ಯಾರಿಗೂ ಸುಳಿವು ನೀಡಿಲ್ಲ ಎನ್ನಲಾಗಿದೆ. ಸಮರ್ಪಕ ವಿಷಯ ಬರಲು ಕಾದು ನೋಡಬೇಕು ಎನ್ನುತ್ತಿದೆ ಸಮುದಾಯದ ಹಿರಿಯರು.