ಪ್ರಮುಖ ಸುದ್ದಿ
BREAKING NEWS – ಲಿಂಗಾಯತರಿಗೆ ಮೀಸಲಾತಿ, ನಾಳೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಸಾಧ್ಯತೆ.!?
ಲಿಂಗಾಯತರಿಗೆ ಮೀಸಲಾತಿ, ನಾಳೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಸಾಧ್ಯತೆ.!?
ವಿವಿ ಡೆಸ್ಕ್ಃ ನಾಳೆ ಶುಕ್ರವಾರ ಸಿಎಂ ಯಡಿಯೂರಪ್ಪ ಸಚಿವ ಸಂಪುಟ ಸಭೆ ಕರೆದಿದ್ದು ಲಿಂಗಾಯತರಿಗೆ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ನಿರ್ಣಯಕೈಗೊಳ್ಳುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಈಗಾಗಲೇ ವೀರಶೈವ-ಲಿಂಗಾಯತ ಅಭಿವೃದ್ಧಿ ಮಂಡಳಿ ನಿಗಮ ರಚನೆಗೆ ಆದೇಶ ನೀಡಿದ್ದ ಸಿಎಂ ಯಡಿಯೂರಪ್ಪ ಇದೀಗ ಲಿಂಗಾಯತರ ಬಹು ದಿನಗಳ ಬೇಡಿಕೆಯಾದ ಓಬಿಸಿಗೆ ಸೇರಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ನಾಳೆ ಶುಕ್ರವಾರ ಕರೆದ ಸಚಿವ ಸಂಪುಟ ಸಭೆಯಲ್ಲಿ ಲಿಂಗಾಯತರನ್ನು ಓಬಿಸಿಗೆ ಸೇರಿಸಲು ನಿರ್ಣಯಕೈಗೊಂಡು, ಆ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಯಾವುದಕ್ಕೂ ನಾಳೆವರೆಗೂ ಕಾಯಬೇಕು.