ಬಸವಭಕ್ತಿ

ಏಕಾಗ್ರತೆ ಹೆಚ್ಚಿಸಿಕೊಳ್ಳಲು ಅಧ್ಯಯನ ಅಗತ್ಯ

ಯಾದಗಿರಿ, ಶಹಾಪುರಃ ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಏಕಾಗ್ರತೆ ಇದ್ದಾಗ ಮಾತ್ರ ಮುಂದೆ ಉಜ್ವಲ ಭವಿಷ್ಯವನ್ನು ಕಾಣಬಹುದು. ಮನಸ್ಸಿನಲ್ಲಿ ಅಸೂಯೆ, ದ್ವೇಷ, ಅಸಹಿಷ್ಣುತೆಯ ಭಾವನೆಗಳು ಹೊಂದಿರಬಾರದು ಎಂದು ನ್ಯೂಯಾರ್ಕದ (ಅಮೇರಿಕಾ) ಸಿವಿಲ್ ಇಂಜಿನಿಯರ್ ರಾಜಯೋಗಿ ಬ್ರಹ್ಮಕುಮಾರ ರಾಮ ಸಿಂಗಾಲ್ ಅಭಿಪ್ರಾಯಪಟ್ಟರು.

ನಗರದ ಚರಬಸವೇಶ್ವರ ಪ್ರೌಢ ಶಾಲಾ ಆವರಣದಲ್ಲಿ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಆಶ್ರಯದಲ್ಲಿ ನಡೆದ 7 ಶತಕೋಟಿ ಶ್ರೇಷ್ಠ ಕರ್ಮಗಳ ವೈಶಿಕ ಯೋಜನೆ ಎಂಬ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಧ್ಯಾನ, ಪ್ರಾರ್ಥನೆ, ಪ್ರೀತಿ, ಮಾನವಿಯ ಅಂತಕರಣ ಇವು ಸಂತೃಪ್ತಿ ಬದುಕಿಗೆ ಅತ್ಯವಶ್ಯಕ ಹಾಗೂ ಮನಸ್ಸಿಗೆ ಶಾಂತಿ, ಸಮಧಾನ, ಮನಸ್ಸಿಗೆ ಏಕಾಗ್ರತೆಯನ್ನು ನೀಡುತ್ತದೆ. ತಂದೆ-ತಾಯಿ, ಗುರು-ಹಿರಿಯರ ಮೇಲೆ ಗೌರವ, ಅವರಿಗೆ ಸಹಾಯ ಸಹಕಾರ ನೀಡುವುದು, ಪ್ರೀತಿ ವಿಶ್ವಾಸದಿಂದ ಕಾಣುವುದು, ಸ್ನೇಹಿತರನ್ನು ಹಾಗೂ ನೆರೆಹೊರೆಯವರೊಂದಿಗೆ ಹೊಂದಾಣಿಕೆಯಿಂದ ಬದುಕವದನ್ನು ಕಲಿಯಬೇಕು.

ಉತ್ತಮ ಮೌಲ್ಯಗಳನ್ನು ಆಳವಡಿಸಿಕೊಂಡಾಗ ಅದು ಎಲ್ಲರೊಂದಿಗೆ ಬೆರೆಯುವ ಶಕ್ತಿಯನ್ನು ಒದಗಿಸಲಿದೆ ಎಂದರು.
ಈ ಸಂದರ್ಭದಲ್ಲಿ ಕಲಬುರ್ಗಿಯ ರಾಜಯೋಗಿನಿ ಬ್ರಹ್ಮಾಕುಮಾರಿ ವಿಜಯಾ ಅಕ್ಕನವರು, ಶಹಾಪುರದ ಉಷಾ ಅಕ್ಕನವರು, ಚರಬಸವೇಶ್ವರ ಪ್ರೌಢಶಾಲೆ ಮುಖ್ಯಗುರು ಬಾಪುಗೌಡ ಅಸಂತಾಪೂರ, ಬಾಪೂಗೌಡ ದರ್ಶನಾಪೂರ ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯ ಶಿವಲಿಂಗಣ್ಣ ಸಾಹು ಉಪಸ್ಥಿತರಿದ್ದರು.

ಉಪನ್ಯಾಸಕಿ ಅನೀತಾ ಕೊಲ್ಲೂರು ನಿರೂಪಿಸಿದರು. ವಿದ್ಯಾರ್ಥಿನಿ ಸುಮಿತ್ರಾ ಸಗರ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಮಾದರಿ ಜೀವನ ನಡೆಸಲು ಬ್ರಹ್ಮಕುಮಾರ ರಾಜಯೋಗಿ ರಾಮ ಸಿಂಗಾಲ್ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು.

Related Articles

Leave a Reply

Your email address will not be published. Required fields are marked *

Back to top button