ಪ್ರಮುಖ ಸುದ್ದಿ
ಶಿವಮೊಗ್ಗಕ್ಕೆ ಬ್ರಿಟನ್ ಕೊರೊನಾ ಕಂಟಕ ಆತಂಕ
ಶಿವಮೊಗ್ಗಕ್ಕೆ ಬ್ರಿಟನ್ ಕೊರೊನಾ ಕಂಟಕ ಆತಂಕ
ಶಿವಮೊಗ್ಗಃ ಜಿಲ್ಲೆಗೆ ಬ್ರಿಟನ್ ನಿಂದ 23 ಜನರು ಆಗಮಿಸಿದ್ದು, ಅವರೆಲ್ಲರನ್ನೂ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, 23 ರಲ್ಲಿ ನಾಲ್ವರಿಗೆ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆ ಆ 4 ಜನರನ್ನು ಕೊವಿಡ್ ವಾರ್ಡ್ಗೆ ದಾಖಲಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಬ್ರಿಟನ್ ನಿಂದ ಬಂದ ಪ್ರಯಾಣಿಕರಲ್ಲಿ ನಾಲ್ವರಿಗೆ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆ ಜಿಲ್ಲೆಯಲ್ಲಿ ಆತಂಕ ಸೃಷ್ಟಿಯಾಗಿದೆ.
ಹೊಸ ರೂಪಾಂತರ ಹೊಂದಿದ ಕೊರೊನಾ ಈ ನಾಲ್ವರಿಗೆ ಆವರಿಸಿದ್ದಲ್ಲಿ ಇನ್ನಷ್ಟು ಆತಂಕ ಹೆಚ್ಚಾಗಲಿದೆ ಎನ್ನಲಾಗಿದೆ.
ಹೀಗಾಗಿ ಜಿಲ್ಲೆಯ ಜನತೆ ಎಚ್ಚರಿಕೆವಹಿಸಬೇಕು ಮುಂಜಾಗೃತವಾಗಿ ಕೊವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಎಲ್ಲಡೆ ಪಾಲಿಸಬೇಕು ಎಂದು ಸರ್ಕಾರ ಸೂಚನೆ ನೀಡಿದೆ.