ಕಾಡುಗತ್ತಲ ಸಂಕ್ರಮಣದಿ ಬೆಳಕ ದಿವಟಿಗೆಯಡಿ ದೇವರ ಪಲ್ಲಕ್ಕಿ ಉತ್ಸವ
ಯಾದಗಿರಿಃ ಜಿಲ್ಲೆಯ ಶಹಾಪುರ ನಗರದಲ್ಲಿ ಪ್ರತಿ ವರ್ಷ ಸಂಕ್ರಾಂತಿ ದಿನ ರಾತ್ರಿಪೂರ ದಿಗ್ಗಿಯ ಸಂಗಮೇಶ್ವರ ಮತ್ತು ಭೀ.ಗುಡಿ ಬಲಭೀಮೇಶ್ವರರ ಪಲ್ಲಕ್ಕಿ ಉತ್ಸವ ವಿದ್ಯುತ್ ದೀಪಗಳ ಅಲಂಕಾರ, ಸಾಲು ಸಾಲು ಬೆಳಕಿನ ದಿವಟಿಗೆ ಮಧ್ಯೆ ಭವ್ಯ ಮೆರವಣಿಗೆ ನಡೆಯುತ್ತಿದ್ದು,
ಸಹಸ್ರಾರು ಭಕ್ತರು ಪಲ್ಲಕ್ಕಿಯೊಳಗಡೆ ವಿರಾಜಮಾನರಾದ ಹನುಮನ ಉತ್ಸವ ಪ್ರತಿಮೆ, ದಿಗ್ವಿಜಯ ಸಂಗಮನಾಥರ ಪ್ರತಿಮೆ ಸಭ್ಯ ದರ್ಶನ ಪಡೆಯಲು ನೂಕು ನುಗ್ಗಲು ನಡೆಯುತ್ತಿದೆ. ಪ್ರಸ್ತುತ ಬಲಭೀಮರ ಪಲ್ಲಕ್ಕಿ ಮೋಚಿಗಡ್ಡ ಸಮೀಪಿಸಿದ್ದು, ಸಂಗಮನಾಥರ ಪಲ್ಲಕ್ಕಿ ಮಾರುತಿ ಮಂದಿರದ ಮುಂದೆ ನೆರದ ಜನಸ್ತೋಮಕೆ ದರ್ಶನ ನೀಡುತಿದೆ.
ಎರಡು ಪಲ್ಲಕ್ಕಿ ಉತ್ಸವ ನಗರದ ದಿಗ್ಗಿ ಬೇಸ್ ತಲುಪಲು ಬೆಳಗಿನಜಾವ ಆವರಿಸಿರುತ್ತದೆ. ಈ ವರ್ಷ ಭಕ್ತರ ಸಂಖ್ಯೆ ಜಾಸ್ತಿ ಕಾಣುತ್ತಿದ್ದು, ಬಂದ ಭಕ್ತರಿಗೆ ನೀರಿನ ವ್ಯವಸ್ಥೆ, ಅನ್ನ ಸಂತರ್ಪಣೆಯಂತಹ ಧರ್ಮದ ಕಾರ್ಯಗಳು ನಡೆದಿವೆ.
ಅಲ್ಲದೆ ದಿಗ್ವಿಜಯ ಬೇಸ್ ಹತ್ತಿರ ಇಮಾಮ್ಖಾಸಿಂ ಮಸೀದಿ ಹತ್ತಿರ ಮುಸ್ಲಿಂ ಬಾಂಧವರು ಸಂಕ್ರಾಂತಿ ಇಮಿತ್ತ ಸಾರ್ವಜನಿಕರಿಗೆ ಎಳ್ಳು ಬೆಲ್ಲ ಹಂಚುವ ಮೂಲಕ ಸೌಹಾರ್ದತೆ ಮೆರೆಯುತಿದ್ದಾರೆ.
*ಗಮನಿಸಿಃ ಇದು ಕೇವಲ 10 ನಿಮಿಷದ ಹಿಂದಿನ ಸುದ್ದಿ.*