ಪ್ರಮುಖ ಸುದ್ದಿ
ಸಮುದಾಯ ಪ್ರತಿನಿಧಿಸುವ ಅರ್ಹತೆ ಜಮೀರ್, ಖಾದರ ಅವರಿಗಿಲ್ಲ- ತನ್ವೀರ್ ಹೇಳಿಕೆ
ಅರ್ಹತೆ ಇಲ್ಲದವರಿಗೆ ಸಚಿವ ಸಂಪುಟ ಸ್ಥಾನಮಾನಃ ತನ್ವೀರ್
ಬೆಂಗಳೂರಃ ಮುಸ್ಲಿಂ ಸಮುದಾಯ ಪ್ರತಿನಿಧಿಸುವ ಅರ್ಹತೆಯನ್ನು ಹೊಂದಿರದ ಜಮೀರ್ ಅಹ್ಮದ್ ಮತ್ತು ಯು.ಟಿ.ಖಾದರ್ ಅವರನ್ನು ಮೈತ್ರಿ ಸರ್ಕಾರ ಸಚಿವರನ್ನಾಗಿ ಮಾಡಿದೆ ಎಂದು ಮಾಜಿ ಸಚಿವ ತನ್ವೀರ್ ಸೇಠ್ ಮಾಧ್ಯಮದ ಮುಂದೆ ಹೇಳಿಕೆಯನ್ನು ನೀಡಿದ್ದಾರೆ.
ತನ್ವೀರ್ ಸೇಠ್ ತಮಗೆ ಸಚಿವ ಸ್ಥಾನ ನೀಡದ ಕಾರಣ ಅಸಮಾಧಾನ ಹೊರಹಾಕಿದ್ದು, ಮುಸ್ಲಿಂ ಸಮುದಾಯ ಪ್ರತಿನಿಧಿಸಲು ಇನ್ನೊಂದು ಸಚಿವಸ್ಥಾನ ಅರ್ಹತೆ ಆಧರಿಸಿ ನೀಡಬೇಕೆಂದು ಒತ್ತಾಯಿಸಿದ್ದಾರೆ.