ಪ್ರಮುಖ ಸುದ್ದಿ
ಚಿರು ನಿಧನ ಬೆನ್ನಲ್ಲೆ ಸರ್ಜಾ ಕುಟುಂಬಕ್ಕೆ ಇನ್ನೊಂದು ಆಘಾತ
ಬೆಂಗಳೂರಃ ಸ್ಯಾಂಡವುಡ್ ನಟ ದೃವಸರ್ಜಾ ಮತ್ತು ಪತ್ನಿ ಪ್ರೇರಣಾಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಕುರಿತು ನಟ ದೃವಸರ್ಜಾ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದು, ಅಲ್ಲದೆ ಶೀಘ್ರ ಗುಣಮುಖರಾಗುವ ಭರವಸೆ ವ್ಯಕ್ತಪಡಿಸಿದ್ದಾರೆ.
ಈಚೆಗೆ ಸಹೋದರ ಚಿರು ಸರ್ಜಾ ಮೃತಪಟ್ಟ ಆಘಾತದಿಂದ ಚೇತರಿಸಿಕೊಳ್ಳುವ ಸಂದರ್ಭದಲ್ಲಿ ದೃವಸರ್ಜಾ ಮತ್ತು ಪತ್ನಿಗೆ ಕೊರೊನಾ ಒಕ್ಕರಿಸಿದ್ದು ಅಭಿಮಾನಗಳಲ್ಲಿ ಆತಂಕ ಮೂಡಿಸಿದೆ. ಅಲ್ಲದೆ ಸರ್ಜಾ ಕುಟುಂಬ ಸಂಕಷ್ಟದಿಂದ ಬಹುಬೇಗ ಪಾರಾಗಿ ಸದೃಢ ಆರೋಗ್ಯದೊಂದಿಗೆ ಬಾಳಿನ ಪಯಣ ಸಾಗಲಿ ಎಂದು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.