ಪ್ರಮುಖ ಸುದ್ದಿ
ಸದನದಲ್ಲೇ ಊಟ , ನಿದ್ರೆಗೆ ನಿರ್ಧಾರ – ಮಾಜಿ ಸಿಎಂ ಬಿಎಸ್ ವೈ
ಬೆಂಗಳೂರು: ಆಪರೇಷನ್ ಕಮಲಕ್ಕೆ ಕಾಂಗ್ರೆಸ್ , ಜೆಡಿಎಸ್ ನ ಕೆಲ ಶಾಸಕರು ಬಲಿ ಆಗಿದ್ದಾರೆಂದು ಆರೋಪಿಸಿ ದೋಸ್ತಿ ಪಕ್ಷದ ನಾಯಕರಿಂದ ಆಕ್ರೋಶ ಪ್ರತಿಭಟನೆ. ವಿಶ್ವಾಸ ಮತ ಯಾಚನೆಗೆ ಕಮಲ ಪಕ್ಷದ ನಾಯಕರು ಪಟ್ಟು ಹಿನ್ನೆಲೆ ಇಂದಿನ ಕಲಾಪದಲ್ಲಿ ಕೋಲಾಹಲ ಸೃಷ್ಠಿ ಆಗಿದೆ. ಡೆಪ್ಯೂಟಿ ಸ್ಪೀಕರ್ ಕೃಷ್ಣಾರೆಡ್ಡಿ ಕಲಾಪವನ್ನು ನಾಳೆ ಬೆಳಗ್ಗೆ 11ಗಂಟೆಗೆ ಮುಂದೂಡಿದ್ದಾರೆ.
ಖುದ್ದು ಸಿಎಂ ಕುಮಾರಸ್ವಾಮಿ ವಿಶ್ವಾಸ ಮತ ಯಾಚಿಸಿದ್ದಾರೆ. ಆದರೆ, ಇಂದು ಹೊಸ ತಂತ್ರ ಹೂಡಿ ವಿಪ್ ಪ್ರಕರಣ ಇತ್ಯರ್ಥ ಆಗುವವರೆಗೂ ವಿಶ್ವಾಸ ಮತ ಮುಂದೂಡಲು ಮುಂದಾಗಿದ್ದಾರೆ. ಆದರೆ, ನಾವು ವಿಶ್ವಾಸ ಮತ ಯಾಚನೆ ಮುಗಿಯುವವರೆಗೂ ಸದನದಲ್ಲೇ ಉಳಿಯುತ್ತೇವೆ. ಬಿಜೆಪಿ ಶಾಸಕರೆಲ್ಲರೂ ಊಟ, ನಿದ್ರೆ ಸದನದಲ್ಲೇ ಮಾಡುತ್ತೇವೆ ಎಂದು ವಿಪಕ್ಷ ನಾಯಕ , ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.