ಪ್ರಮುಖ ಸುದ್ದಿ
ದೋಸ್ತಿಗೆ ಠಕ್ಕರ್ : ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ನಾಮನಿರ್ದೇಶನವೂ ರದ್ದು
ಬೆಂಗಳೂರು: ದೋಸ್ತಿ ಸರ್ಕಾರ ನೇಮಿಸಿದ್ದ ನಿಗಮ ಮಂಡಳಿ, ಅಕಾಡೆಮಿ ಅಧ್ಯಕ್ಷರುಗಳನ್ನು ವಜಾಗೊಳಿಸಿದ್ದ ಯಡಿಯೂರಪ್ಪ ಸರ್ಕಾರ ಇಂದು ರಾಜ್ಯದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ ನೇಮಿಸಲಾಗಿದ್ದ ನಾಮನಿರ್ದೇಶಿತ ಸದಸ್ಯರ ನೇಮಕಾತಿಯನ್ನು ರದ್ದುಗೊಳಿಸಿದ್ದಾರೆ. ಆ ಮೂಲಕ ದೋಸ್ತಿ ಸರ್ಕಾರಕ್ಕೆ ಠಕ್ಕರ್ ಕೊಟ್ಟಿದ್ದಾರೆ.
ಅಷ್ಟೇ ಅಲ್ಲದೆ, ಐಎಎಸ್, ಐಪಿಎಸ್ ಅಧಿಕಾರಿಗಳನ್ನೂ ವರ್ಗಾವಣೆ ಮಾಡುವ ಮೂಲಕ ದೋಸ್ತಿ ಸರ್ಕಾರದ ಅವಧಿಯಲ್ಲಿದ್ದ ಅಧಿಕಾರಿಗಳನ್ನು ಬದಲಿಸಿದ್ದಾರೆ. ತಮ್ಮದೇ ಆದ ಹಿಡಿತ ಸಾಧಿಸುವ ನಿಟ್ಟಿನಲ್ಲಿ ಯಡಿಯೂರಪ್ಪ ಪ್ರತಿ ಹೆಜ್ಜೆಯನ್ನು ಅಳೆದು ತೂಗಿ ಇಡುತ್ತಿದ್ದಾರೆ ಎನ್ನಲಾಗಿದೆ.