ಇಂದಿರಾಗಾಂಧಿ ಜೈಲಿಗೆ ಹೋಗಿರಲಿಲ್ಲವೇ ಸಿದ್ಧರಾಮಯ್ಯನವರೇ… – ಬಿಎಸ್ ವೈ ಗುಡುಗು
ರಾಯಚೂರು: ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹೋದಲ್ಲಿ, ಬಂದಲ್ಲಿ ಯಡಿಯೂರಪ್ಪ ಜೈಲಿಗೆ ಹೋಗಿದ್ದರು ಎಂದು ಹೇಳುತ್ತಿದ್ದಾರೆ. ಯಡಿಯೂರಪ್ಪನನ್ನು ಜೈಲಿಗೆ ಕಳುಹಿಸಿದ್ದು ಅಕ್ಷಮ್ಯ ಎಂದು ಹೈಕೋರ್ಟ್ ಹೇಳಿದೆ. ಷಡ್ಯಂತ್ರ ರೂಪಿಸಿ ನನ್ನನ್ನು ಜೈಲಿಗೆ ಕಳುಹಿಸಲಾಗಿತ್ತು. ಈ ಹಿಂದೆ ಇದೇ ಸಿದ್ಧರಾಮಯ್ಯ ಅವರು ಸೋನಿಯಾ ಗಾಂಧಿ ಅವರನ್ನು ಜೈಲಿಗೆ ಕಳುಹಿಸಬೇಕೆಂದು ಉದ್ದುದ್ದ ಭಾಷಣ ಮಾಡುತ್ತಿದ್ದರು.
ನೈತಿಕತೆ ಇಲ್ಲದ ಸಿದ್ಧರಾಮಯ್ಯ ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ಇಂದಿರಾಗಾಂಧಿ ಒಂದು ತಿಂಗಳು ಕಾಲ ಜೈಲಿಗೆ ಹೋಗಿರಲಿಲ್ಲವೇ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಬೇಲ್ ಪಡೆದಿಲ್ಲವೇ ಸಿದ್ಧರಾಮಯ್ಯನವರೇ ಎಂದು ಮಾಧ್ಯಮಗಳೆದುರು ಪ್ರಶ್ನಿಸುವ ಮೂಲಕ ಮಾಜಿ ಸಿಎಂ, ಬಿಜೆಪಿ ರಾಜ್ಯದ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಸಿದ್ಧರಾಮಯ್ಯ ವಿರುದ್ಧ ಕಿಡಿ ಕಾರಿದ್ದಾರೆ.
ರಾಯಚೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬಿ.ಎಸ್.ಯಡಿಯೂರಪ್ಪ ಅವರು ಸಿದ್ಧರಾಮಯ್ಯನವರ ಹಗರಣ ಬಯಲಿಗೆಳೆದರೆ ಅವರ ಗತಿ ಏನಾಗಬಹುದೆಂದು ಯೋಚಿಸಲಿ. ಚೆಕ್ ಮೂಲಕ ಲಂಚ ಪಡೆದಿದ್ದೇನೆಂದೆಲ್ಲಾ ನನ್ನ ವಿರುದ್ಧ ಸಿಎಂ ಅಯೋಗ್ಯನಂತೆ ಮಾತನಾಡುವುದನ್ನು ಬಿಡಲಿ ಎಂದು ಬಿ.ಎಸ್.ವೈ ಗುಡುಗಿದ್ದಾರೆ.