ಸಂಗೀತದಿಂದ ಮನಸ್ಸು ಪ್ರಫುಲ್ಲಗೊಳ್ಳಲಿದೆ-ಪುರಾಣಿಕ
ಶ್ರಾವಣ ಸಂಗೀತ ಕಾರ್ಯಕ್ರಮ
ಯಾದಗಿರಿ: ಸಂಗೀತದಿಂದ ಮಾನಸಿಕ ಒತ್ತಡ ಕಡಿಮೆಯಾಗಿ ಮನಸ್ಸಿಗೆ ಶಾಂತಿ ನೆಮ್ಮದಿ ತಂದುಕೊಡುತ್ತದೆ. ಸಂಗೀತ ರೋಗವನ್ನು ನಿವಾರಿಸುವ ಶಕ್ತಿ ಹೊದಿದೆ ಎಂದು ವಿಶ್ವ ಮಧ್ವಮಹಾಪರಿಷತ್ ಜಿಲ್ಲಾ ಸಂಚಾಲಕರಾದ ಪಂ. ನರಸಿಂಹಾಚಾರ್ಯ ಪುರಾಣಿಕ ಹೇಳಿದರು.
ಅವರು ನಗರದ ಮಾಣಿಕೇಶ್ವರಿ ಕಾಲೋನಿಯ ಶ್ರೀ ವೀರಾಂಜನೇಯ ದೇವಸ್ಥಾನ ಸಮಿತಿ, ಹರಿದಾಸ ಸಾಹಿತ್ಯ ಸಂಗಮ ಮತ್ತು ಶ್ರೀರಕ್ಷಾ ಸಂಗೀತಪಾಠಶಾಲೆ ಇವರುಗಳ ಸಂಯುಕ್ತಾಶ್ರದಲ್ಲಿ ವೀರಾಂಜನೇಯ ದೇವಸ್ಥಾನದಲ್ಲಿ ಆಯೋಜಿಸಿದ್ದ ಶ್ರಾವಣ ಮಾಸದ ಉಪನ್ಯಾಸ ಮತ್ತು ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಂಗೀತ ಆಲಿಸುವುದರಿಂದ ಏಕಾಗ್ರತೆ ಮೂಡಿ ಮನಸ್ಸು ಪ್ರಪುಲ್ಲಗೊಳ್ಳುತ್ತದೆ ಮತ್ತು ಚೈತನ್ಯ ಭರಿತವಾಗುತ್ತದೆ. ಸಂಗೀತದಲ್ಲಿ ಪ್ರತಿಯೊಬ್ಬರು ತಮ್ಮನ್ನು ತಾವು ತೊಡಗಿಸಿಕೊಳ್ಳುವುದಲ್ಲದೇ ಮಕ್ಕಳಿಗೂ ಸಂಗೀತದಲ್ಲಿ ಆಸಕ್ತಿ ಬರುವಂತೆ ಮಾಡಬೇಕಾಗಿದೆ ಎಂದರು.
ಪಂ.ರಾಘವೇಂದ್ರಾಚಾರ್ ಬಳಿಚಕ್ರ ಮಾತನಾಡುತ್ತಾ, ಶ್ರಾವಣ ಮಾಸವು ಸಂಪೂರ್ಣವಾಗಿ ದೇವತಾರಾಧನೆಗೆ ಮೀಸಲಿರುವ ಮಾಸವಾಗಿದೆ. ಈ ಮಾಸದಲ್ಲಿ ಭಕ್ತಿ, ಶ್ರದ್ಧೆಯೀಂದ ದೇವರನ್ನು ಭಜಿಸುವುರಿಂದ, ಪೂಜಿಸುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಶರಣಬಸವ ವಠಾರ ಅವರು ಸುಗಮ ಸಂಗೀತ ಗಾಯನ ನಡೆಸಿಕೊಟ್ಟರು. ಶ್ರೀ ರಕ್ಷಾ ಪಾಠಶಾಲೆಯ ಮಕ್ಕಳು ಮುದ್ದಾದ ಕಂಠದಲ್ಲಿ ಜನಮನ ಸೆಳೆಯುವಂತೆ ಹಾಡುಗಳನ್ನು ಹಾಡಿದರು. ಹಾರ್ಮೋನಿಯಂ ಮಹೇಶ, ತಬಲಾ ಶ್ರೀಗುರು ವಠಾರ, ಬಾನ್ಸುರಿ ಸೂರಜ್ ಕುಮಾರ್ ವಾದಿಸಿದರು. ಮಕ್ಕಳಾದ ಗೌತಮಿ ನಾಟೇಕಾರ್, ಶ್ರೇಯಾ ಸಿಎಂ ಪಾಟೀಲ್, ಪ್ರಣವಜ್ಯೋಷಿ, ಕೃತಿಕಾ ಗಿರೆಪನೊರ್, ಕುಮಾರ್ ಶಿವಕುಮಾರ್, ಶ್ರೀರಕ್ಷಾ ವಠಾರ್ ಹಾಡಿದರು.
ಈ ಸಂಧರ್ಭದಲ್ಲಿ ದೇವಸ್ಥಾನ ಸಮಿತಿಯ ಗೌರವಾಧ್ಯಕ್ಷ ವೆಂಕಟೇಶ ಇಂದುಪುರ, ಅಧ್ಯಕ್ಷ ಶಾಂತಗೌಡ ಪಗಲಾಪೂರ, ಶರಣಗೌಡ, ಹರಿದಾಸ ಸಾಹಿತ್ಯ ಸಂಗಮ ಸಂಚಾಲಕ ರವೀಂದ್ರ ಕುಲಕರ್ಣಿ, ಶಂಕರ್ ಸೋನಾರೆ, ಅನೀಲ ದೇಶಪಾಂಡೆ, ಶಂಕ್ರಪ್ಪ ಅರುಣಿ, ಸ್ನೇಹಾ ಕುಲಕರ್ಣಿ, ಶ್ರೀಮತಿ ಸವಿತಾ, ನಿರುಪಾ ಪಾಟೀಲ, ಭಾಗ್ಯಶ್ರೀ ಕುಲಕರ್ಣಿ, ವಾಣಿಶ್ರೀ ಕುಳಗೇರಿ, ನೇಹಾ, ವೆಂಕಟೇಶ ಕುಮಾರ್ ಮತ್ತಿತರು ಇದ್ದರು.