ಜನಮನ
ಕೋಟೆನಾಡಿನಲ್ಲಿ ಶ್ರೀರಾಮುಲು ಗ್ರಾಮ ವಾಸ್ತವ್ಯ : ಗುಡಿಸಿಲಲ್ಲಿ ಶಿವಲಿಂಗ ಪೂಜೆ, ಯೋಗ!
ಚಿತ್ರದುರ್ಗ : ಜಿಲ್ಲೆಯ ಮೊಳಕಾಲ್ಮೂರು ಮತಕ್ಷೇತ್ರ ವ್ಯಾಪ್ತಿಯಲ್ಲಿನ ಚಳ್ಳಕೆರೆ ತಾಲೂಕಿನ ನೆಲಗೇತನಹಟ್ಟಿ ಗ್ರಾಮದ ದಲಿತ ಕಾಲೋನಿಯಲ್ಲಿ ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಗ್ರಾಮ ವಾಸ್ತವ್ಯ ಮಾಡಿದ್ದಾರೆ. ದುರಗಪ್ಪ-ಮಂಜಮ್ಮ ದಂಪತಿ ಮನೆಯಲ್ಲಿ ಕಳೆದ ರಾತ್ರಿ ವಾಸ್ತವ್ಯ ಹೂಡಿದ್ದ ಶ್ರೀರಾಮುಲು ಮಂಜಮ್ಮ ತಯಾರಿಸಿದ ರಾಗಿ ರೊಟ್ಟಿ, ಬದನೇಕಾಯಿ ಚಟ್ನಿ ಮತ್ತು ಹಾಗಲಕಾಯಿ ಪಲ್ಯ ಸವಿದು ನಿದ್ರೆಗೆ ಜಾರಿದರು.
ಬೆಳಗ್ಗೆ 5:30ಕ್ಕೆ ಎಚ್ಚರಗೊಂಡ ರಾಮುಲು ಗ್ರಾಮದಲ್ಲಿ ವಾಕಿಂಗ್ ಮಾಡುತ್ತಲೇ ಜನರ ಅಹವಾಲು ಕೇಳಿದರು. ಬಳಿಕ ನಿತ್ಯ ಕರ್ಮ ಮುಗಿಸಿ ದುರಗಪ್ಪ ಅವರ ಗುಡಿಸಲಿನಲ್ಲೇ ನಿತ್ಯದಂತೆ ಶಿವಲಿಂಗ ಪೂಜೆ ಮಾಡಿದರು. ಬಳಿಕ ಮಂಜಮ್ಮ ಅವರಿಗೆ ಸೀರೆಯನ್ನು ಉಡುಗೊರೆಯಾಗಿ ನೀಡಿ ಇರಲು ಉತ್ತಮವಾದ ಸೂರು ಒದಗಿಸಿಕೊಡುವ ಭರವಸೆ ನೀಡಿದರು.