ಮಾಸ್ಕ್ ಬಳಕೆ ಸಾಂಕ್ರಾಮಿಕ ರೋಗ ತಡೆಗೆ ಪೂರಕ-ಡಿವೈಎಸ್ಪಿ ಹುಗಿಬಂಡಿ
ಮಾಸ್ಕ್ ಬಳಕೆ ಸಾಂಕ್ರಾಮಿಕ ರೋಗ ತಡೆಗೆ ಪೂರಕ-ಡಿವೈಎಸ್ಪಿ ಹುಗಿಬಂಡಿ
ಶಹಾಪುರಃ ಕೊರೊನಾ ಸೇರಿದಂಯತೆ ಹಲವು ಸಾಂಕ್ರಮಿಕ ರೋಗಗಳ ತಡೆಗೆ ಮಾಸ್ಕ್ ಪೂರಕವಾಗಿದ್ದು, ಸರ್ವರೂ ಸಮರ್ಪಕವಾಗಿ ಬಳಸಬೇಕೆಂದು ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ ತಿಳಿಸಿದರು. ನಗರದಲ್ಲಿ ಮಾಸ್ಕ್ ಡೇ ಹಾಗೂ ಸಾಂಕ್ರಾಮಿಕ ರೋಗ ಮಾಸಾಚರಣೆ ಹಿನ್ನೆಲೆ ನಗರದ ಬಸವೇಶ್ವರ ವೃತ್ತದಲ್ಲಿ ಸಾರ್ವಜನಿಕರಿಗೆ ಮಾಸ್ಕ್ ವಿತರಿಸಿ ಮಾತನಾಡಿದರು.
ಕೊರೊನಾ ಮಹಾಮಾರಿ ಇಡಿ ಜಗತ್ತನ್ನೆ ತಲ್ಲಣಗೊಳಿಸಿದೆ. ಅದರಿಂದ ರಕ್ಷಣೆ ಪಡೆಯಲು ನಾಗರಿಕರು ಮಾಸ್ಕ್ ಬಳಸಬೇಕು. ಅಲ್ಲದೆ ಮುಖ್ಯವಾಗಿ ಅಂತರ ಕಾಯ್ದುಕೊಳ್ಳಬೇಕು. ಪ್ರತಿಯಬ್ಬರು ಸ್ವಚ್ಛತೆಗೆ ಮಹತ್ವ ನೀಡಬೇಕು, ಸ್ಯಾನಿಟೈಸರ್ ಬಳಸಬೇಕು ಇಲ್ಲವಾದಲ್ಲಿ ಸಾಬೂನು ಮೂಲಕ ಆಗಾಗ ಕೈತೊಳೆದುಕೊಳ್ಳಬೇಕು. ಅನಗತ್ಯವಾಗಿ ಹೊರಗಡೆ ಬರುವದನ್ನು ನಿಲ್ಲಿಸಬೇಕು. ಅಗತ್ಯಗನುಸಾರವಾಗಿ ಸಂಚಾರವಿರಲಿ. ಜೊತೆಗೆ ಮಾರಕ ಕೊರೊನಾ ತಡೆಗೆವಹಿಸಬೇಕಾದ ಮುನ್ನೆಚ್ಚರಿಕೆಗಳನ್ನು ಕ್ರಮವಾಗಿ ಪಾಲಿಸಿ ಎಂದು ಕರೆ ನೀಡಿದರು.
ಕೊರೊನಾ ಅನಾರೋಗ್ಯ ವಾತಾವರಣ ಸೃಷ್ಟಿಸಿ ದೇಶದ ಆರ್ಥಿಕ ವ್ಯವಸ್ಥೆ ಜೊತೆಗೆ ಮನುಷ್ಯರ ಜೀವನವೇ ಬುಡಮೇಲು ಮಾಡಿದೆ, ಹೀಗಾಗಿ ಎಲ್ಲರೂ ಜಾಗೂರುಕತೆಯಿಂದ ನಿಯಮಗಳನ್ನು ಅನುಸರಿಸಬೇಕು. ಮಾಸ್ಕ್ ಡೇ ಆಚರಣೆ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಸರ್ಕಾರ ಈ ಕಾರ್ಯಕ್ರಮವನ್ನು ಕೈಗೊಂಡಿದೆ. ಪ್ರತಿಯೊಬ್ಬರು ಕೊರೊನಾ ಕುರಿತು ತಿಳುವಳಿಕೆ ಮೂಡಿಸಬೇಕು ಎಂದರು. ಈ ಸಂದರ್ಭದಲ್ಲಿ ಪಿಐ ಹನುಮರಡ್ಡೆಪ್ಪ, ಪಿಎಸ್‍ಐಗಳಾದ ಚಂದ್ರಕಾಂತ, ಸಿದ್ದೇಶ್ವರ ಮತ್ತು ನಗರ ಠಾಣಾ ಸಿಬ್ಬಂದಿ ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.