ಪ್ರಮುಖ ಸುದ್ದಿ
ನಿಮ್ಮ ತೀಟೆ ತೀರಿಕೆಗೆ ಚುನಾವಣೆಗೆ ಹೋಗ್ಬೇಕಾ.!
ದೇವೆಗೌಡರ ಹೆಳಿಕೆಗೆ ಬಿಎಸ್‍ವೈ ಪ್ರತಿಕ್ರೀಯೆ
ಬೆಂಗಳೂರಃ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ನಾಯಕರ ಹೇಳಿಕೆ ಗೊಂದಲ ಮೂಡಿಸುತ್ತಿವೆ. ದೇವೇಗೌಡರು ಮಧ್ಯಂತರ ಚುನಾವಣೆ ಕುರಿತು ಹೇಳಿರುವ ಹೇಳಿಕೆಗೆ ತೀಕ್ಷಣ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ತಮ್ಮ ತೀಟೆ ತೀರಿಸಿಕೊಳ್ಳುವದಕ್ಕಾಗಿ ಚುನಾವಣೆಗೆ ಹೋಗಬೇಕಾ.? ಮತದಾರರು ನೀಡಿದ ಆಶೀರ್ವಾದಕ್ಕೆ ಧಕ್ಕೆ ತಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇವೆಗೌಡರು ಮಧ್ಯಂತರ ಚುನಾವಣೆ ಬಗ್ಗೆ ಮಾತನಾಡಿರುವದು ಎಷ್ಟರ ಮಟ್ಟಿಗೆ ಸರಿ. ಪ್ರಜಾಪ್ರಭುತ್ವ ವಿರೋಧಿ ನಡೆ ಇದು. ಕೇವಲ 36-37 ಸೀಟ್‍ಗಳನನ್ನು ಪಡೆದಿದ್ದ ಜೆಡಿಎಸ್ ಅಧಿಕಾರ ನಡೆಸಲು ಆಗುವದಿಲ್ಲ ಅಂದ್ರೆ. 105 ಸ್ಥಾನಗಳನ್ನು ಪಡೆದ ಬಿಜೆಪಿ ಸರ್ಕಾರ ನಡೆಸಲಿದೆ. ತಮಗೆ ಸರ್ಕಾರ ನಡೆಸಲು ಆಗದೇ ಇದ್ದ ಪಕ್ಷದಲ್ಲಿ ಜಾಗ ಖಾಲಿ ಮಾಡಿ ಎಂದು ವಾಗ್ದಾಳಿ ನಡೆಸದರು.