ಪ್ರಮುಖ ಸುದ್ದಿ
25 ರಿಂದ 30 ಸಾವಿರ ಮತಗಳ ಅಂತರದಿಂದ ಬಿಜೆಪಿ ಗೆಲುವು-BSY
ಬೆಂಗಳೂರಃ ರಾಜ್ಯದಲ್ಲಿ ನಡೆದ ಉಪ ಚುನಾವಣೆ ಮತದಾನ ಮುಗಿದು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಆಯಾ ಅಭ್ಯರ್ಥಿಗಳ ಹಣೆಬರಹ ಈಗಾಗಲೇ ಮತಪೆಟ್ಟಿಗೆಯಲ್ಲಿ ಸುಭದ್ರವಾಗಿದೆ.
ಇನ್ನೇನು ಸೋಮವಾರ ಫಲಿತಾಂಶ ಹೊರಬೀಳುವದು ಮಾತ್ರ ಬಾಕಿದೆ. ಆದರೆ ಮಳೆ ನಿಂತರೂ ಹನಿ ನಿಂತಿಲ್ಲ ಎನ್ನುವಂತೆ, ಚುನಾವಣೆ ಮತದಾನ ಮುಗಿದಿದ್ದರೂ ಗೆಲವು ಸೋಲು ಲೆಕ್ಕಾಚಾರ ಮಾತ್ರ ಇನ್ನೂ ನಿಂತಿಲ್ಲ. ಇದಕ್ಕೆಲ್ಲ ಸ್ಪಷ್ಟ ಉತ್ತರ ಡಿ.9 ರವರೆಗೆ ಕಾಯಲೇಬೇಕು.
ಈ ನಡುವೆ ಸಿಎಂ ಯಡಿಯೂರಪ್ಪ ಇಂದು ಬೆಂಗಳೂರಿನಲ್ಲಿ ಮಾಧ್ಯಮಕ್ಕೆ ಹೇಳಿಕೆಯೊಂದು ನೀಡಿದ್ದಾರೆ. ಅವರ ಲೆಕ್ಕಚಾರ ಪ್ರಕಾರ, ಉಪ ಚುನಾವಣೆ ನಡೆದ 15 ಕ್ಷೇತ್ರಗಳಲ್ಲಿ ತಮ್ಮ ಬಿಜೆಪಿ ಅಭ್ಯರ್ಥಿಗಳು ಅಂದಾಜು 25 ರಿಂದ 30 ಸಾವಿರ ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಎಂದಿದ್ದಾರೆ.
ಯಾವುದಕ್ಕೂ ಡಿ.9 ರ ಆಗಮನ ಫಲಿತಾಂಶ ಮತ ಎಣಿಕೆ ನಡೆಯಬೇಕಿದೆ. ಅಂದು ಬೆಳಗ್ಗೆ 11 ಗಂಟೆಯೊಳಗೆ ಬಹುತೇಕ ಫಲಿತಾಂಶ ಹೊರಬೀಳಲಿದೆ ಎನ್ನಲಾಗಿದೆ.