ಪ್ರಮುಖ ಸುದ್ದಿ
ಸಿಎಂ ಯಡಿಯೂರಪ್ಪ ‘ದಂಡಯಾತ್ರೆ’ : ಮಾಜಿ ಸಂಸದ ಉಗ್ರಪ್ಪ ವ್ಯಂಗ್ಯ
ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೆಂಗಳೂರು ಟೂ ನವದೆಹಲಿ, ನವದೆಹಲಿ ಟೂ ಬೆಂಗಳೂರು ದಂಡಯಾತ್ರೆ ಮಡುತ್ತಿದ್ದಾರೆ. ಅವರ ಸ್ಥಿತಿ ನೋಡಿದರೆ ನಮಗೆ ಗಾಬರಿ ಆಗುತ್ತಿದೆ. ಅಧಿಕಾರಿಕ್ಕಾಗಿ ಯಡಿಯೂರಪ್ಪ ಅವರು ಅಭಿಮಾನ ಶೂನ್ಯರಾಗಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ವ್ಯಂಗ್ಯವಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ವಿ.ಎಸ್.ಉಗ್ರಪ್ಪ ಮುಖ್ಯಮಂತ್ರಿಗಳಿಂದ ಪ್ರವಾಹ ಪೀಡಿತ ಪ್ರದೇಶಕ್ಕೆ ನೆರವು ನೀಡಲು ಕೇಂದ್ರದಿಂದ ಹೆಚ್ಚಿನ ಅನುದಾನವೂ ತರಲಾಗಿಲ್ಲ. ಯುದ್ಧೋಪಾದಿಯಲ್ಲಿ ನೆರೆ ಸಂತ್ರಸ್ಥರಿಗೆ ಪರಿಹಾರ ಕಾರ್ಯ ನಡೆಯಬೇಕಿತ್ತು. ಆದರೆ, ಯಡಿಯೂರಪ್ಪ ಸರ್ಕಾರ ನೆರೆ ಸಂತ್ರಸ್ಥರನ್ನು ನಿರ್ಲಕ್ಷಿಸಿದೆ. ಮತ್ತೊಂದು ಕಡೆ ಹೈಕಮಾಂಡ್ ಒಪ್ಪಿಗೆ ಇಲ್ಲದೆ ಸಚಿವ ಸಂಪುಟವೂ ರಚನೆ ಆಗಿಲ್ಲ. ನಾನಾಗಿದ್ದರೆ ಅಲ್ಲೇ ರಾಜೀನಾಮೆ ಕೊಟ್ಟು ಬರುತ್ತಿದೆ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಸಂಸದ ಉಗ್ರಪ್ಪ ಅವರು ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ದಾರೆ.