ರಾಜ್ಯದ ವಿವಿಧ ಜಿಲ್ಲೆಯ ಕೊರೊನಾ ಪಾಸಿಟಿವ್ ಪಟ್ಟಿಃ ಯಾದಗಿರಿ ಜಿಲ್ಲೆ ಇದರಲ್ಲಿದೆಯೇ.?
ಬೆಂಗಳೂರಃ ರಾಜ್ಯದಲ್ಲಿ ಕೊರೋನಾ ವೈರಸ್ ದಾಳಿ ಮುಂದುವರೆದಿದೆ. ರವಿವಾರ ಹೊಸದಾಗಿ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಉಡುಪಿಯಲ್ಲಿ ಇಬ್ಬರು ಮತ್ತು ನಂಜನಗೂಡಿನ 5 ಜನರಲ್ಲಿ ಕೊರೊನಾ ಪತ್ತೆಯಾದ ಕಾರಣ ಸೋಂಕಿತರ ಸಂಖ್ಯೆ 83 ಕ್ಕೆ ಏರಿಕೆಯಾಗಿದೆ.
ಇದುವರೆಗೂ ರಾಜ್ಯದಲ್ಲಿ 83 ಪ್ರಕರಣ ಪತ್ತೆಯಾಗಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ.
ಬೆಂಗಳೂರಿನಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇಲ್ಲಿ 41 ಕೊರೊನಾ ಪಾಸಿಟಿವ್ ಕೇಸ್ಗಳಿವೆ.
ನಂತರದ ಸ್ಥಾನದಲ್ಲಿ ಚಿಕ್ಕಬಳ್ಳಾಪುರ ಮತ್ತು ಮೈಸೂರನಲ್ಲಿ ತಲಾ ಎಂಟು ಪ್ರಕರಣಗಳು ದೊರೆತಿವೆ.
ಇದುವರೆಗೆ ಪಾಸಿಟಿವ್ ಪ್ರಕರಣಗಳ ಪೈಕಿ ಐವರು ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎನ್ನಲಾಗಿದೆ.
ಕೊರೋನಾ ಪಾಸಿಟಿವ್ ಪ್ರಕರಣಗಳ ಜಿಲ್ಲಾವಾರು ಪಟ್ಟಿ ಈ ಕೆಳಕಂಡಂತಿದೆ:
ಬೆಂಗಳೂರು – 41 ಪ್ರಕರಣ
ಚಿಕ್ಕಬಳ್ಳಾಪುರ – 8 ಪ್ರಕರಣ
ಮೈಸೂರು – 8 ಪ್ರಕರಣದಕ್ಷಿಣ ಕನ್ನಡ – 7 ಪ್ರಕರಣ
ಉತ್ತರ ಕನ್ನಡ – 7 ಪ್ರಕರಣ
ಕಲಬುರಗಿ – 3 ಪ್ರಕರಣ
ದಾವಣಗೆರೆ – 3 ಪ್ರಕರಣ
ಉಡುಪಿ – 3 ಪ್ರಕರಣ
ಕೊಡಗು – 1 ಪ್ರಕರಣ
ಧಾರವಾಡ – 1 ಪ್ರಕರಣ
ತುಮಕೂರು – 1 ಪ್ರಕರಣ
ಯಾದಗಿರಿ ಜಿಲ್ಲೆಯಲ್ಲಿ ಇದುವರೆಗೂ ಪಾಸಿಟಿವ್ ಆದ ವರದಿ ಇಲ್ಲ. ಆದರೆ ಶಂಕಿತರು ಇದ್ದಾರೆ. ಅವರಿಗೆ 14 ದಿನಗಳ ದಿಗ್ಭಂದನ ಹೇರಿದ್ದು ಆರೋಗ್ಯ ಇಲಾಖೆ ಸಿಬ್ಬಂದಿ ನಿತ್ಯ ಬೆಳಗ್ಗೆ ಸಂಜೆ ಆರೋಗ್ಯ ತಪಾಸಣೆ ನಡೆಸುವ ಮೂಲಕ ನಿಗಾವಹಿಸಿದ್ದಾರೆ.