ಪ್ರಮುಖ ಸುದ್ದಿ
ಕೇಂದ್ರದಿಂದ ಮೊದಲ ಕಂತಿನ ಪರಿಹಾರ ಘೋಷಣೆ
ಕೇಂದ್ರ ಸರ್ಕಾರದಿಂದ ಮಧ್ಯಂತರ ಪರಿಹಾರ ಘೋಷಣೆ
ವಿವಿ ಡೆಸ್ಕ್ಃ ಕರ್ನಾಟಕ ರಾಜ್ಯ ನೆರೆ ಹಾವಳಿಯಿಂದ ಹಾನಿ ಕುರಿತು ಕೇಂದ್ರ ಅಧ್ಯಯನ ತಂಡ ಸಲ್ಲಿಸಿದ ವರದಿ ಆಧರಿಸಿ ಕೇಂದ್ರ ತಂಡ ಮೊದಲನೇಯ ಕಂತಾಗಿ 1200 ಕೋಟಿ ರೂ. ಮಧ್ಯಂತರ ಪರಿಹಾರ ಘೋಷಣೆ ಮಾಡಿದೆ.
ಈ ಕುರಿತು ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಸ್ಪಷ್ಟ ಪಡಿಸಿದ್ದು, ನಾಳೆ ಅಂದರೆ ಶನಿವಾರ ಕರ್ನಾಟಕ ಸರ್ಕಾರದ ಬೊಕ್ಕಸಕ್ಕೆ ಪರಿಹಾರದ ಹಣ ಸೇರಲಿದೆ ಎಂದು ಅವರು ಟ್ವಿಟ್ ಮಾಡಿದ್ದಾರೆ. ರಾಜ್ಯದ ಸಿಎಂ ಸೇರಿದಂತೆ ಬಿಜೆಪಿ ಸಂಸದರು, ನಾಯಕರು ಮಧ್ಯಂತರ ಪರಿಹಾರ ಬಂದಿರುವ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ.