ಪ್ರಮುಖ ಸುದ್ದಿ
ಕಾಂಗ್ರೆಸ್‌ನಿಂದ ಅನ್ಯಾಯವೆಂದು ರಾಜೀನಾಮೆ ನೀಡಿದ ರಾಜಕಾರಣಿಗಳೆಲ್ಲಿದ್ದಾರೆ.? ಖರ್ಗೆ ಪ್ರಶ್ನೆ
ಕಾಂಗ್ರೆಸ್‌ನಿಂದ ಅನ್ಯಾಯವೆಂದು ರಾಜೀನಾಮೆ ನೀಡಿದ ರಾಜಕಾರಣಿಗಳೆಲ್ಲಿದ್ದಾರೆ.? ಖರ್ಗೆ ಪ್ರಶ್ನೆ
ಕಲಬುರ್ಗಿಃ ರಾಜ್ಯ ಬಿಜೆಪಿ ಸರ್ಕಾರ ಈ ಸಲದ ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕ ಭಾಗವನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಜೆಟ್ ಕುರಿತು ಟ್ವಿಟ್ ಮಾಡಿರುವ ಅವರು, ಈ ಮೊದಲು 371(j) ಜಾರಿಗೆ ವಿರೋಧ ವ್ಯಕ್ತಪಡಿಸಿದ್ದ ಬಿಜೆಪಿ ಈಗ ಬಜೆಟ್ ನಲ್ಲಿ ಸಹ ಕಕ ಭಾಗಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು.
ಕೇವಲ ಹೆಸರು ಬದಲಾವಣೆಯಿಂದ ನಮ್ಮ ಭಾಗದ ಭವಿಷ್ಯ ಬದಲಾಗದು ಎಂದು ಟೀಕಿಸಿದರು.
ಅಲ್ಲದೆ ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಕೆಲ ಶಾಸಕರು ಕಾಂಗ್ರೆಸ್ ನಿಂದ ಅನ್ಯಾಯವಾಗಿದೆ ಎಂದು ರಾಜೀನಾಮೆ ನೀಡಿದ್ದರು. ರಾಜೀನಾಮೆ ನೀಡಿದ ರಾಜಕಾರಣಿಗಳು ಈಗೆಲ್ಲಿದ್ದಾರೆ ಎಂದು ಸಂಭೋಧಸಿದರು.