ಪ್ರಮುಖ ಸುದ್ದಿ
ಸೈನಿಕರಿಗೆ ಬರಲಿದೆ ಸರ್ವತ್ರ ಜಾಕೆಟ್.. ಏನಿದು ಸರ್ವತ್ರ ಗೊತ್ತೆ.?
ದೇಶ ಕಾಯೋ ಯೋಧರಿಗೆ ಆಧುನಿಕ ಬುಲೆಟ್ ಪ್ರೂಫ್ ಜಾಕೆಟ್.!
ನವದೆಹಲಿ : ದೇಶ ಕಾಯೋ ವೀರ ಯೋಧರಿಗೆ ಆಧುನಿಕ ಬುಲೆಟ್ ಪ್ರೂಫ್ ಜಾಕೆಟ್ ನ್ನು ಭಾರತೀಯ ಸೇನೆಯ ಸೇನಾಧಿಕಾರಿ ಮೇಜರ್ ಅನೂಪ್ ಮಿಶ್ರಾ ಕಂಡು ಹಿಡಿದಿದ್ದು, ಶೀಘ್ರದಲ್ಲಿ ಅವುಗಳು ನಮ್ಮ ಸೈನಿಕರಿಗೆ ದೊರೆಯಲಿವೆ ಎಂದು ಹೇಳಲಾಗುತ್ತಿದೆ.
ಅನೂಪ್ ಅವರ ಸಾಧನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ಆರ್ಮಿ ಮುಖ್ಯಸ್ಥ ಬಿಪಿನ್ ರಾವತ್ ಅವರು ಅನುಪ್ ಮಿಶ್ರಾ ಸಾಧನೆಗೆ ಆರ್ಮಿ ಡಿಸೈನ್ ಬ್ಯೂರೂ ಎಕ್ಸಲೆನ್ಸ್ಇ ಅವಾರ್ಡ್ ನೀಡಿ ಗೌರವಿಸಿದ್ದಾರೆ.
ಗಡಿಭಾಗದಲ್ಲಿ ಸಾಮಾನ್ಯವಾಗಿ ಗುಂಡಿನ ದಾಳಿ ನಡೆಯೋದರಿಂದ ಇಂತಹ ಜಾಕೆಟ್ ಅಗತ್ಯವಿದೆ ಎಂದು ಅನೂಪ್ ಮಿಶ್ರಾ ಹೇಳಿದ್ದು, ಈ ಬುಲೆಟ್ ಪ್ರೂಫ್ ಜಾಕೆಟ್ ಗೆ ಸರ್ವತ್ರ ಎಂದು ಹೆಸರಿಡಲಾಗಿದೆ.