ಪ್ರಮುಖ ಸುದ್ದಿ

ಬಸ್ ಟಾಪ್ ಮೇಲಿಂದ ಕೆಳಗಡೆ ಉರುಳಿದ ವಿದ್ಯಾರ್ಥಿಗಳು

ಬಸ್ ಡೇ ಆಚರಿಸುವಾಗ ಬಸ್ ಮೇಲಿಂದಲೇ ಕೆಳಗರ ಬಿದ್ದ ವಿದ್ಯಾರ್ಥಿಗಳು

ಬಸ್ ಡೇ ಆಚರಣೆ ವೇಳೆ ಅವಘಡ

ಚನ್ನೈಃ ಇಲ್ಲಿನ ಚಸ್ ಪೇಟ್ ಪಟ್ಟಣದಲ್ಲಿ ವಿದ್ಯಾರ್ಥಿಗಳು ಇಂದು ಬಸ್ ಡೇ ಆಚರಣೆ ಖುಷಿಯಲ್ಲಿ ಬಸ್ ಮೇಲೊಂದರ ಮೇಲಗಡೆ ಹತ್ತಿ ನೂರಾರು ವಿದ್ಯಾರ್ಥಿಗಳು ಖುಷಿಯಿಂದ ಘೋಷಣೆ ಕೂಗುತ್ತಿದ್ದರು. ಚಾಲಕನು ಅಷ್ಟೆ ಜಾಗರೂಕತೆಯಿಂದ ಚಲಾಯಿಸುತ್ತಿದ್ದ,

ಆದರೆ ಸೈಡಲ್ಲಿ ಬಂದ್ ಬೈಕ್‌ ಸವಾರನೊಬ್ಬ ಬಸ್ ಎದುರಿಗೆ ಬಂದು ಹಿಂದುಗೇ ತಿರುಗಿ ಬಸ್ ಮೇಲೆ‌ ಕುಳಿತಿದ್ದ ವಿದ್ಯಾರ್ಥಿಗಳನ್ನು ನೋಡಲು ಬ್ರೆಕ್ ಹಾಕುತ್ತಾನೆ. ಬಸ್ ಚಾಲಕ ಎಲ್ಲಿ ಬೈಕ್ ಗೆ ಟಚ್ ಆಗುತ್ತದಯೋ ಎಂದು ಗಡಿಬಿಡಿಯಲ್ಲಿ ಬ್ರೇಕ್ ಹಾಕುತ್ತಾನೆ.

ಆಗ ಬಸ್ ಟಾಪ್ ಮೇಲೆ ಕುಳಿತಿದ್ದ ವಿದ್ಯಾರ್ಥಿಗಳು ಮುಂಭಾಗದಿಂದ ಮಾವಿನಕಾಯಿ ಉರುಳಿದಂತೆ‌ ನೆಲಕ್ಕೆ‌ ಬಿದ್ದಿದ್ದಾರೆ. ಬಸ್ ಡೇ ಖುಷಿಯಿಂದ ಆಚರಿಸುವಗಾ ಇಂತಹ‌ ಘಟನೆ ನಡೆದಿದೆ ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ನಡೆದಿಲ್ಲ.

ಆದರೆ ಬಸ್ ಟಾಪ್ ದಿಂದ ನೆಲಕ್ಕುರುಳುವದು ನೋಡಿದ್ರೆ ಅಯ್ಯಯ್ಯೋ ಎನ್ನದೇ ಇರಲಾರದು ಜೀವ ಎನ್ನಬಹುದು.
ಖುಷಿಯಲ್ಲಿ ಬಸ್ ಟಾಪ್ ಮೇಲೆ ಏರಿ ಕೇಕೆ ಹಾಕುವಾಗ ಎಚ್ವರವಹಿಸಬೇಕಿತ್ತು ಎಂದು ಎನ್ನುತ್ತಿದ್ದಾರೆ ಈಗ ಕೆಳಗಡೆ ಬಿದ್ದ‌ ವಿದ್ಯಾರ್ಥಿ ಮಹೋದಯರು.

Related Articles

Leave a Reply

Your email address will not be published. Required fields are marked *

Back to top button