ಇನ್ಮುಂದೆ ಬಸ್ ಗಳ ಅಪಘಾತ ಆಗಲ್ವಂತೆ ಏಕೆ ಗೊತ್ತಾ..?
ಅಪಘಾತ ತಡೆಯಲು ದೇವರ ಮೊರೆ ಹೋದ ಅಧಿಕಾರಿಗಳು.!
ಚಾಮರಾಜನಗರಃ ಇತ್ತೀಚಿನ ದಿನಗಳ್ಲಿ ಬಸ್ ಗಳ ಪಅಪಘಾತ ಹೆಚ್ಚಾಗುತ್ತಿದ್ದರಿಂದ ಅಪಘಾತಗಳನ್ನು ಪತಪ್ಪಿಸುವಂತೆ ಜೆಎಸ್ ಆರ್ ಡಿಸಿ ಅಧಿಕಾರಿಗಳು ದೇವರ ಮೊರೆ ಹೋದ ಘಟನೆ ಜಿಲ್ಲೆಯ ಗುಂಡ್ಲುಪೇಟೆ ಬಸ್ ಡಿಪೋದಲ್ಲಿ ನಡೆದಿದೆ.
ಚಾಮರಾಜ ನಗರದ ಕೆಎಸ್ ಆರ್ ಟಿಸಿ ವಿಭಾಗದ ನಿಯಂತ್ರಣ ಅಧಿಕಾರಿ ಅಶೋಕ ಕುಮಾರ ಅವರ ಆದೇಶದ ಮೇರೆಗೆ ಗುಂಡ್ಲುಪೇಟೆ ಡಿಪೊದಲ್ಲಿ ಹೋಮ ಹವನಗಳು ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ.
ಬಸ್ ಗಳ ಅಪಘಾತ ಜಾಸ್ತಿಯಾಗುತ್ತಿರುವದರಿಂದ ಗಣಪತಿ ಹೋಮ ನಡೆಸಲಾಗಿದೆ. ಇದರಿಂತ ಅಪಘಾತಗಳ ಸಂಖ್ಯೆ ಸಾಕಷ್ಟು ಇಳಿಮುಖವಾಗಲಿದೆ ಎಂಬ ನಂಬಿಕೆಯಿಂದಲೇ ಈ ಹೊಮ ಕವನ ಕಾರ್ಯಕ್ಕೆ ಮುಂದಾಗಿದೆ ಎನ್ನಲಾಗಿದೆ.
ಅಪಘಾತಗಳಿಂದ ಬೆಚ್ಚಿಬಿದ್ದ ಸಾರಿಗೆ ಅಧಿಕಾರಿಗಳು…. ದೇವರ ಮೊರೆ ಹೋಗುವದು ಅನಿವಾರ್ಯ ಇದರಿಂದ ಇಳಿತದ ಆಗಲಿದೆ ಹೊರತು ಕೆಟ್ಟದಂತು ಆಗಲಾರದು ಎಂದು ಗಣಪತಿ ಹೋಮ ನಡೆಸಿದ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.
ಇತ್ತೀಚೆಗಷ್ಟೇ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಭಾರಿ ಅನಾಹುತವೊಂದು ತಪ್ಪಿತ್ತು ಇಂತಹ ಧಾರ್ಮಿಕ ಆಚರಣೆಯಿಂದಲೆ, ನಮ್ಮ ನಂಬಿಕೆ ಬಹು ಮುಖ್ಯ ಎಂದು ಸಿಬ್ಬಂದಿ ತಿಳಿಸಿದ್ದಾರೆ.
ಹೋಮ ಹವನದಿಂದ ನಮ್ಮ ಮನಸ್ಸುಗಳು ಪರಿಶುದ್ಧವಾಗಿರಬೇಕು ಉತ್ತಮ ವಾತಾವರಣ ನಿರ್ಮಾಣಕ್ಕೆ ಕಾರವಾಗುತ್ತೆ ಅನ್ನುವಾದಾದರೆ ನಡೆಸಿದರೇನು ತೊಂದರೆಯಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇದೇ ವೇಳೆ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಬ್ಬಂದಿ ಗಳಿಗೆ ಊಟೋಪಚಾರ ವ್ಯವಸ್ಥೆ ಸಹ ಮಾಡಲಾಗಿತ್ತು.