ಪ್ರಮುಖ ಸುದ್ದಿ
ಬಸ್ ಚಾಲಕ, ನಿರ್ವಾಹಕನ ಮೇಲೆ ಹಲ್ಲೆ ನಡೆಸಿ ಬೈಕ್ ಸವಾರರು ಪರಾರಿ
ಕಲಬುರ್ಗಿಃ ಬೈಕ್ ಸವಾರರಿಬ್ಬರು ಬಸ್ ಚಾಲಕ ಮತ್ತು ನಿರ್ವಾಹಕನ ಮೇಲೆ ಹಲ್ಲೆ ನಡೆಸಿ ಪರಾರಿಯಾದ ಘಟನೆ ನಗರದ ಖಾದ್ರಿ ಚೌಕ್ ಬಳಿ ನಡೆದಿದೆ.
ಹಲ್ಲೆಗೊಳಗಾದ ಚಾಲಕ ಯಲ್ಲಾಲಿಂಗ್ ಮತ್ತು ನಿರ್ವಾಹಕ ವೀರಭದ್ರ ಇವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಆಳಂದ ಪಟ್ಬಣದಿಂದ ಬಸ್ ಕಲಬುರ್ಗಿ ಪ್ರವೇಶಿಸಿದಾಗ ಬಸ್ ಗೆ ಅಡ್ಡ ಅಡ್ಡಲಾಗಿ ಬರುತಿದ್ದ ಬೈಕ್ ಸವಾರರನ್ನು ಚಾಲಕ ಪ್ರಶ್ನಿಸಿದ್ದಕ್ಕಾಗಿ ಬೈಕ್ ಸವಾರರು ಚಾಲಕ ಹಾಗೂ ನಿರ್ವಾಹಕನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ತಮ್ಮದೇ ತಪ್ಪಿಟ್ಕೊಂಡು ಚಾಲಕ, ನಿರ್ವಾಹಕನ ಮೇಲೆ ಹಲ್ಲೆ ನಡಿಸಿರುವುದು ತಪ್ಪು. ಇಂತಹ ಟಪೋರಿಗಳಿಗೆ ಪೊಲೀಸರು ತಕ್ಕ ಪಾಠ ಕಲಿಸಬೇಕಿದೆ.ಘಟನೆ ಕುರಿತು ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.