ನರೇಗಲ್: ಒಂದು ಬೈಕ್‌ಗೆ 5 ಕುಂಟಿಕಟ್ಟಿ ಎಡೆ ಹೊಡೆದ ಕೃಷಿಕರು
ಎತ್ತುಗಳ ಕೊರತೆ ನೀಗಿಸಲು ಬೈಕ್ ಬಳಸಿದ ರೈತರು

ಎತ್ತುಗಳ ಕೊರತೆ ನೀಗಿಸಲು ಬೈಕ್ ಬಳಸಿದ ರೈತರು
ನರೇಗಲ್: ಒಂದು ಬೈಕ್‌ಗೆ 5 ಕುಂಟಿಕಟ್ಟಿ ಎಡೆ ಹೊಡೆದ ಕೃಷಿಕರು
—
ವರದಿ- ಪ್ರಕಾಶ ಗುದ್ನೇಪ್ಪನವರ್
ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ನರೇಗಲ್ ಹೋಬಳಿಯ ವ್ಯಾಪ್ತಿಯಲ್ಲಿ ಜಮೀನಿನಲ್ಲಿ ಕಸದ ಎಡೆ ಹೊಡೆಯಲು ಎತ್ತುಗಳು ಸಿಗದ ಕಾರಣ ರೈತರು, ಕೃಷಿ ಚಟುವಟಿಕೆಗೆ ಬೈಕ್‌ಗಳನ್ನು ಬಳಸುತ್ತಿದ್ದಾರೆ.
ಬೈಕ್‌ನ ಹಿಂಬದಿಯಲ್ಲಿನ ಕ್ಯಾರಿಯರ್‌ಗೆ ಕಬ್ಬಿಣದ ಸರಳುಗಳಿಂದ ವೆಲ್ಡಿಂಗ್ ಮಾಡಿಸಿ, ಅದಕ್ಕೆ 5 ಅಡಿ ಉದ್ದದ ಕಬ್ಬಿಣದ ಪೈಪ್ ಅಳವಡಿಸಿ ಎರಡು ಅಡಿಗೆ ಒಂದರಂತೆ 5 ಕುಂಟಿಗಳನ್ನು ಜೋಡಿಸಲಾಗುತ್ತದೆ. ಜೋಲಿ ತಪ್ಪಿ ಬೀಳದಂತೆ ಮತ್ತು ಚಲಿಸಲು ಅನುಕೂಲ ಆಗುವಂತೆ ಹಿಂಬದಿಗೆ ಎರಡು ಬೈಕ್ ಗಾಲಿಗಳನ್ನು ಜೋಡಿಸಲಾಗುತ್ತದೆ. ಬೈಕ್ ಸವಾರ ಗೇರ್‌ನಲ್ಲಿ ಚಲಿಸುವಾಗ, ಕುಂಟಿ ಹಿಡಿದಿರುವ ಕಾರ್ಮಿಕರು ಸುಲಭವಾಗಿ ಸಾಗಬಹುದಾಗಿದೆ.
ಎತ್ತುಗಳಿಂದ ಎಡೆ ಹೊಡೆದಲ್ಲಿ ಹೆಚ್ಚು ಸಮಯ ಮತ್ತು ವೆಚ್ಚ ತಗಲುತ್ತದೆ. ಎತ್ತುಗಳಿಗಾಗಿ ಹುಡುಕಿದರೂ ಸಿಗದಿರುವ ಕಾಲದಲ್ಲಿ ಬೈಕ್ ರೈತರ ಪಾಲಿಗೆ ಎತ್ತುಗಳ ಸಹಾಯವಿಲ್ಲದೆ ಉಳುಮೆ ಮಾಡಲು ವರದಾನವಾಗಿದೆ ಎನ್ನುತ್ತಾರೆ ರೈತರು.