ಪ್ರಮುಖ ಸುದ್ದಿ

ದಕ್ಷಿಣ ಭಾರತ ಅಭಿವೃದ್ಧಿಗೆ ಪ್ರತ್ಯೇಕ ಬಜೆಟ್ ಮಂಡನೆಗೆ ಆಗ್ರಹಿಸಿದವರಾರು.. ಗೊತ್ತೆ.?

ಸೈಕಲ್ ಮೇಲೆ ಕೃಷ್ಣೆ ಯಾತ್ರೆ ಆರಂಭಿಸಿದ ಸ್ವಾಮೀಜಿ ಬೇಡಿಕೇನು..?

ನಗರಕ್ಕೆ ಆಗಮಿಸಿದ ಸ್ವಾಮೀಜಿಯ ಸೈಕಲ್ ಯಾತ್ರೆಗೆ ಸ್ವಾಗತ

ಯಾದಗಿರಿಃ ಕೃಷ್ಣಾನದಿ ಉಗಮಸ್ಥಾನದಿಂದ ಸಾಗರದಲ್ಲಿ ಲೀನವಾಗುವ ಪ್ರದೇಶದವರೆಗೆ ಸೈಕಲ್ ಮೇಲೆ ಸವಾರಿ ಮಾಡುತ್ತ ಸುತ್ತುತ್ತಿರುವ ತೆಲಂಗಾಣದ ಬಸೀರಾಬಾಗ್ ನಿವಾಸಿ ಸ್ವಾಮಿ ಪೊನ್ನಾಲ ಗೌರಿಶಂಕರ ಅವರು ಮಾರ್ಗ ಮಧ್ಯ ಜಿಲ್ಲೆಯ ಶಹಾಪುರ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಇಲ್ಲಿನ ಯುವಕರು ಅವರನ್ನು ಗೌರವಿಸಿ ಸತ್ಕರಿಸಿದರು.

ಈ ಸಂದರ್ಭದಲ್ಲಿ ಅಭಿಪ್ರಾಯ ಹಂಚಿಕೊಂಡ ಅವರು ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಆಂದ್ರ, ಮಹಾರಾಷ್ಟ್ರ, ತೆಲಂಗಾಣ, ಕೇರಳ ಹಾಗೂ ತಮಿಳುನಾಡು ರಾಜ್ಯಗಳಿಗೆ ಪ್ರತ್ಯೇಕವಾದ ವಿಶೇಷ ಬಜಟ್ ನೀಡಿದಾಗ ಮಾತ್ರ ದಕ್ಷಿಣ ಭಾಗ ಅಭಿವೃದ್ಧಿಯಾಗುತ್ತದೆ ಇದು ನನ್ನ ಮೊದಲ ಬೇಡಿಕೆಯಾಗಿದೆ.
ನನ್ನ ಬೇಡಿಕೆಯನ್ನು ಕೇಂದ್ರ ಸರ್ಕಾರ ಗಮನಿಸಿ ಪರಿಗಣನೆಗೆ ತೆಗದುಕೊಳ್ಳಬೇಕು. ಕೇಂದ್ರ ಗಮಸೆಳೆಯಲು ಕೃಷ್ಣಾ ಯಾತ್ರೆ ನಡೆಸಿದ್ದೇನೆ ಎಂದು ತಿಳಿಸಿದರು.

ಅಲ್ಲದೆ ಜನರಲ್ಲಿ ಮೂಢನಂಬಿಕೆ ತೊಲಗಬೇಕು, ಲೋಕ ಕಲ್ಯಾಣವಾಗಬೇಕು, ಪ್ರಾಣಿಗಳ ರಕ್ಷಣೆ ಪರಿಸರ ರಕ್ಷಣೆ, ನದಿಗಳ ಶುಚಿತ್ವ ಕುರಿತಂತೆ ಹತ್ತು ಹಲವು ಜನೋಪಯೋಗಿ ಸಂದೇಶಗಳನ್ನು ಹೊತ್ತು ಬಹಳ ವರ್ಷಗಳಿಂದ ಸೈಕಲ್ ಯಾತ್ರೆ ಮೂಲಕ ಜಾಗೃತಿ ಮೂಡಿಸುತ್ತಿದ್ದು, ಯಾತ್ರೆ ಸಂದರ್ಭದಲ್ಲಿ ಜನತೆಗೆ ಮಾರ್ಗದರ್ಶನ ಮಾಡುತ್ತಿದ್ದು ಸರ್ವರು ಇದನ್ನು ಅರಿತು ಕೊಂಡರೆ ನಮ್ಮ ಕಾರ್ಯ ಸಫಲತೆಯಾದಂತೆ ಎಂದು ಹಲವಾರು ಕಾರ್ಯಕ್ರಮಗಳ ಬಗ್ಗೆ ಮಾಹಿತಿ, ಪ್ರವಾಸದ ಅನುಭವ ಕುರಿತು ತಿಳಿಸಿದರು.

ಈಗಾಗಲೇ 12 ಜ್ಯೋತಿರ್ಲಿಂಗಗಳ ದರ್ಶನ ಮಾಡಿರುವ ಇವರು 12 ನದಿಗಳನ್ನು ಸಂದರ್ಶಿಸುವ ಮಹತ್ವಾಕಾಂಕ್ಷೆಯೊಂದಿಗೆ ಸಧ್ಯ ಕೃಷ್ಣೆಯ ತಟದಲ್ಲಿ ಸಂಚಾರ ಆರಂಭಿಸಿದ್ದು ತಮಗೆ ಸರಿ ಎನಿಸಿದ ಸ್ಥಳದಲ್ಲಿ ಇಳಿದುಕೊಂಡು ಯಾವುದಕ್ಕೂ ಅಪೇಕ್ಷೆ ಪಡದೆ ಜನತೆ ಪ್ರೀತಿಯಿಂದ ಸ್ವಾಗತಿಸಿದರೆ ಅವರ ಆಹ್ವಾನವನ್ನು ಸ್ವೀಕರಿಸುತ್ತ ಮುಂದಿನ ಪ್ರಯಾಣ ಬೆಳಸುತ್ತಾರೆ. ಈ ಸಂದರ್ಭದಲ್ಲಿ ಆನಂದ ಹಿರೇಮಠ, ಅರವಿಂದ ಹಿರೇಮಠ, ಕರೆಪ್ಪ, ಪಾಂಡುರಂಗ ಇತರರು ಉಪಸ್ಥಿತರಿದ್ದು ಆತ್ಮೀಯವಾಗಿ ಬೀಳ್ಕೊಟ್ಟರು.

Related Articles

Leave a Reply

Your email address will not be published. Required fields are marked *

Back to top button