ಕರದಳ್ಳಿ ನಿಧನಃ ಸಾಹಿತಿ ಅಕ್ಕಿ ಕಂಬನಿ, ಹಲವರ ಸಂತಾಪ
ವಿವಿ ಡೆಸ್ಕ್ಃ ಮಕ್ಕಳ ಸಾಹಿತಿ ಚಂದ್ರಕಾಂತ ಕರದಳ್ಳಿ ಅವರ ಅಗಲಿಕೆಯ ಸುದ್ದಿ ಆಘಾತ ತಂದಿದೆ. ಕರದಳ್ಳಿ ಅಗಲಿಕೆಯಿಂದ ಮಕ್ಕಳ ಸಾಹಿತ್ಯ ಲೋಕ ನಲುಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಕೋಡಿ ನಮಿಸಿದ ನಾಡಿನ ಖ್ಯಾತ ಸಂಶೋಧಕ, ಸಾಹಿತಿ ಡಿ.ಎನ್.ಅಕ್ಕಿ ಗೋಗಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಕರದಳ್ಳಿ ಅವರ ಪರಿವಾರದ ದುಖಃದಲ್ಲಿ ಅಕ್ಕಿ ಅವರೂ ಮತ್ತು ಅವರ ಪರಿವಾರ ಭಾಗಿಗಳು ಎಂದು ತಿಳಿಸಿದ್ದಾರೆ.
ಅದೇ ರೀತಿ ಸಂಧ್ಯಾ ಸಾಹಿತ್ಯ ವೇದಿಕೆಯ ಅಧ್ಯಕ್ಷ ರವಿ ಹಿರೇಮಠ ಸಾಹಿತಿ ಕರದಳ್ಳಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದು, ಅವರ ಅಗಲಿಕೆಯಿಂದ ಕನ್ನನಡ ಸಾಹಿತ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಒಡನಾಡಿಯಾಗಿದ್ದ ನನಗೆ ಕರದಳ್ಳಿಯವರ ಸಾವಿನ ಸುದ್ದಿ ನಂಬಲು ಅಸಾಧ್ಯ ಎನಿಸುತ್ತಿದೆ. ಅವರ ರಚಿಸಿದ ಪುಸ್ತಕಗಳು ಮಕ್ಕಳು ಹಾಗೂ ಸಾಹಿತ್ಯ ಅಭಿರುಚಿ ಆಸಕ್ತರ ಮನದಲ್ಲಿ ಅಚ್ಚಳಿಯದೆ ಉಳಿದಿವೆ ಎಂದಿದ್ದಾರೆ.
ಕರದಳ್ಳಿ ನಿಧನಃ ಹಲವರ ಸಂತಾಪ
ಕಂಬನಿಃ ಹೆಸರಾಂತ ಸಾಹಿತಿ ಚಂದ್ರಕಾಂತ ಕರದಳ್ಳಿ ಅವರ ನಿಧನಕ್ಕೆ ನಗರದ ಗಣ್ಯರು, ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು ಜನಪ್ರತಿನಿಧಿಗಳು ಕಂಬನಿ ಮಿಡಿದಿದ್ದಾರೆ.
ಶಾಸಕ ಶರಣಬಸಪ್ಪಗೌಡ ದರ್ಶನಾಪುರ, ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ, ಮಲ್ಲಣ್ಣ ಮಡ್ಡಿ ಸಾಹು, ಬಸವರಾಜ ಹಿರೇಮಠ, ಕೆಂಚಪ್ಪ ನಗನೂರ, ಸಿದ್ದು ಆರಬೋಳ, ಗುರು ಕಾಮಾ, ವಿಶ್ವಕರ್ಮ ಸಮಾಜದ ಮಾಜಿ ಅಧ್ಯಕ್ಷ ರಾಜೂ ಪತ್ತಾರ, ಮಲ್ಲಿಕಾರ್ಜುನ ಗಂಗಾಧರಮಠ, ರಾಘವೇಂದ್ರ ಹಾರಣಗೇರಾ, ಖಾಸಿಂಅಲಿ ಹುಜರತಿ ಸೇರಿದಂತೆ ಶಿಕ್ಷಕ ವರ್ಗ, ವಿದ್ಯಾರ್ಥಿಗಳು ಇತರರು ಸಂತಾಪ ಸೂಚಿಸಿದ್ದಾರೆ.