ಪ್ರಮುಖ ಸುದ್ದಿ
ಡಿ.21 ಪೌರತ್ವ ಮಸೂದೆ ಪರ ಬೃಹತ್ ರ್ಯಾಲಿ – ಯತ್ನಾಳ
ಡಿ.21 ರಂದು ಪೌರತ್ವ ಮಸೂದೆ ಪರ ಬೃಹತ್ ರ್ಯಾಲಿ- ಯತ್ನಾಳ
ವಿಜಯಪುರಃ ಮೋದಿಜಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ ಈಗಾಗಲೇ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ ಪರವಾಗಿ ನಗರದಲ್ಲಿ ಬೃಹತ್ ರ್ಯಾಲಿ ಆಯೋಜಿಸಲಾಗಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವತು, ಪೌರತ್ವ ತಿದ್ದುಪಡೆ ಕಾಯ್ದೆ ಜಾರಿಗೊಳಿಸಿರುವದು ಸ್ವಾಗತಾರ್ಹವಾಗಿದೆ.
ದೇಶದ ಹಿತ ದೃಷ್ಟಿಹಿನ್ನಲೆ CAB ಮಸೂದೆ ಅಗತ್ಯವಿತ್ತು. ಮುಸ್ಲಿಂ ದೇಶಗಳಲ್ಲಿರುವ ಅಲ್ಪ ಸಂಖ್ಯಾತ ಹಿಂದೂಗಳ ರಕ್ಷಣೆಗೆ ಈ ಮಸೂದೆ ಅನುಕೂಲವಾಗಲಿದೆ.
ಬೇರೆ ದೇಶಗಳಲ್ಲಿ ದೌರ್ಜನ್ಯ, ಅತ್ಯಾಚಾರಕ್ಕೊಳಗಾದ ಹಿಂದೂಗಳು ಆಶ್ರಯ ಅರಸಿ ಭಾರತಕ್ಕೆ ಬರುವದು ಸಹಜ, ಅಂತವತ ರಕ್ಷಣೆ ನಮ್ಮಕರ್ತವ್ಯ ಎಂದು ಅವರು ತಿಳಿಸಿದ್ದಾರೆ.
ಇಲ್ಲಿ ಯಾವುದೇ ಧರ್ಮದ ವಿರುದ್ಧ ಕಾಯ್ದೆ ಬಳಕೆಯಾಗಲ್ಲ ಯಾವುದೇ ಟಾರ್ಗೆಟ್ ಮಾಡಿಲ್ಲ ಎಂದು ಅವರು ತಿಳಿಸಿದ್ದಾರೆ.