ಕೃಷ್ಣಾ ಮೇಲ್ದಂಡೆ ಯೋಜನೆ 3 ನೇ ಹಂತಕ್ಕೆ ಸಂಪುಟ ಸಭೆ ಅನುಮೋದನೆ
ಚಳಿಗಾಲದ ಅಧಿವೇಶನದಲ್ಲಿ ಮೌಢ್ಯ ಪ್ರತಿಬಂಧಕ ಮಸೂದೆ ಮಂಡನೆ
ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಆ ಪೈಕಿ ಉತ್ತರ ಕರ್ನಾಟಕದತ್ತ ಕಾಂಗ್ರೆಸಗ ಸರ್ಕಾರ ಚಿತ್ತ ಹರಿಸಿದೆ. ಕೃಷ್ಣಾ ಮೇಲ್ದಂಡೆ ಯೋಜನೆ 3 ನೇ ಹಂತಕ್ಕೆ ಸಂಪುಟ ಅನುಮೋದನೆ ನೀಡಿದೆ. ಅಂದಾಜು 51.148 ಕೋಟಿ ವೆಚ್ಚದ ಯೋಜನೆ ಸಿದ್ಧಪಡಿಸಿರುವ ಯೋಜನೆಗೆ ಸಂಪುಟ ಅನುಮೋದನೆ ನೀಡಿದೆ. ಈ ಯೋಜನೆ ಉತ್ತರ ಕರ್ನಾಟಕದ ಪಾಲಿಗೆ ಮಹತ್ವದ ನಿರ್ಣಯವಾಗಿದೆ. ಅಲ್ಲದೆ ಉತ್ತರ ಕರ್ನಾಟಕದ 6.19 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗಲಿದ್ದು ಲಕ್ಷಾಂತರ ರೈತರಿಗೆ ಅನುಕೂಲವಾಗಲಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಂಪುಟ ಸಭೆ ಬಳಿಕ ಸಚಿವರಾದ ಎಮ್.ಬಿ.ಪಾಟೀಲ್ ಹಾಗೂ ಕಾನೂನು ಸಚಿವ ಟಿ.ಬಿ.ಜಯಚಂದ್ರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ರು. ಸಚಿವ ಜಯಚಂದ್ರ ಮಾತನಾಡಿ ಮುಂದಿನ ಅಧೀವೇಶನದಲ್ಲಿ ಮೌಢ್ಯ ಪ್ರತಿಬಂಧಕ ಮಸೂದೆ ಮಂಡಿಸುತ್ತೇವೆ. ಈಗಾಗಲೇ ಸಚಿವ ಸಂಪುಟದಲ್ಲಿ ಕರಡು ಮಸೂದೆಗೆ ಸಂಪುಟ ಸಭೆಯ ಒಪ್ಪಿಗೆ ಸಿಕ್ಕಿದೆ ಎಂದಿದ್ದಾರೆ. ಮೌಢ್ಯ ಪ್ರತಿಬಂದಕ ಕಾಯ್ದೆಯಲ್ಲಿ ವಾಸ್ತುಶಾಸ್ತ್ರ, ಜೋತಿಷ್ಯ, ಹರಿಕಥೆ, ಕೀರ್ತನೆ ಸೇರಿ ಸಾಮನ್ಯ ಪೂಜೆಗೆ ತೊಂದರೆಯಿಲ್ಲ. ಮಡೆಸ್ನಾನ, ಬೆತ್ತಲೆ ಸೇವೆ, ದೇವರ ಹೆಸರಲ್ಲಿ ಹಿಂಸೆಗೆ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ನವೆಂಬರ್ ನಲ್ಲಿ ಅಧಿವೇಶನ ನಡೆಯಲಿದ್ದು ಸಿಎಂ ಸಿದ್ಧರಾಮಯ್ಯ ದಿನಾಂಕ ನಿಗದಿ ಪಡಿಸಲಿದ್ದಾರೆ ಎಂದು ಸಚಿವ ಜಯಚಂದ್ರ ತಿಳಿಸಿದ್ದಾರೆ.
Valley du