ಪ್ರಮುಖ ಸುದ್ದಿ

ಮಡ್ನಾಳ-ಇಂಗಳಗಿ ರಸ್ತೆ ಕಾಮಗಾರಿಗೆ ಶಾಸಕ ಗುರು ಪಾಟೀಲ್ ಚಾಲನೆ

2 ಕೋಟಿ 47 ಲಕ್ಷ ವೆಚ್ಚದ ಡಾಂಬರೀಕರಣ ರಸ್ತೆಗೆ ಚಾಲನೆ

ಯಾದಗಿರಿಃ ಯಾವುದೇ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎನ್ನುವದಾದರೆ, ಆ ದೇಶ ಪ್ರವೇಶಿಸುವ ರಸ್ತೆ ನೋಡಿಯೇ ಎಷ್ಟರಮಟ್ಟಿಗೆ ಅಭಿವೃದ್ಧಿ ಹೊಂದಿದೆ ಎಂಬುದನ್ನು ತಿಳಿಯುತ್ತದೆ ಎಂದು ದಾರ್ಶನಿಕರೊಬ್ಬರು ಹೇಳಿದ ನೆನಪು. ಅದರಂತೆ ಆಯಾ ನಗರ ಪಟ್ಟಣಗಳು ಎಷ್ಟರಮಟ್ಟಿಗೆ ಅಭಿವೃದ್ಧಿ ಹೊಂದಿವೆ ಎಂಬುದನ್ನು ಅಳೆಯಲು ಆ ಕ್ಷೇತ್ರ ಪ್ರವೇಶಿಸುವ ರಸ್ತೆಗಳಿಂದಲೇ ತಿಳಿಯಬಹುದು ಎಂದು ಶಾಸಕ ಗುರು ಪಾಟೀಲ್ ಶಿರವಾಳ ತಿಳಿಸಿದರು.

ಜಿಲ್ಲೆಯ ಶಹಾಪುರ ತಾಲೂಕಿನ ಮಡ್ನಾಳ ಗ್ರಾಮದಲ್ಲಿ ಮಡ್ನಾಳದಿಂದ ಇಂಗಳಿಗಿ ಗ್ರಾಮದವರೆಗೆ 2 ಕೋಟಿ 47 ಲಕ್ಷ ರೂ. ವೆಚ್ಚದ ಡಾಂಬರೀಕರಣ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು,

ಎಚ್‍ಕೆಆರ್‍ಡಿಬಿ 2017-18 ಯೋಜನೆಯಡಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ಪಡೆಯಲಾಗಿದೆ. ಅದರಲ್ಲಿ ಈ ಯೋಜನೆಯೊಂದಾಗಿದೆ. ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾದ ಮೇಲೆ ನಾಗರಿಕರಿಗೆ ನೀಡಿದ ಭರವಸೆಯಂತೆ ಕ್ಷೇತ್ರದಲ್ಲಿ ಸಮರ್ಪಕವಾಗಿ ರಸ್ತೆ, ಚರಂಡಿ, ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆ ಶೇ.90 ರಷ್ಟು ಒದಗಿಸುವಲ್ಲಿ ಸಫಲನಾಗಿದ್ದೇನೆ. ಉಳಿದಡೆ ಒಂದಿಷ್ಟು ಬಾಕಿ ಕೆಲಸಗಳು ಇರಬಹುದು.

ಆದರೆ ಪ್ರತಿ ಹಳ್ಳಿಯಲ್ಲಿ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಇತರೆ ಮೂಲ ಸೌಲಭ್ಯಗಳನ್ನು ಒದಗಿಸಿದ್ದೇನೆ. ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಜನರ ಕಾಳಜಿಯು ಅಗತ್ಯವಿದೆ. ಕಾಮಗಾರಿ ಜವಬ್ದಾರಿ ಹೊತ್ತ ಗುತ್ತಿಗೆದಾರರು ಮತ್ತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸಹ ಪ್ರಾಮಾಣಿಕವಾಗಿ ಕರ್ತವ್ಯ ನಿಭಾಯಿಸಬೇಕು. ಸಾರ್ವಜನಿಕ ಸಂಪರ್ಕ ಕಲ್ಪಿಸುವ ರಸ್ತೆಗಳು ಬಹುದಿನಗಳವರೆಗೆ ಬಾಳಿಕೆ ಬಂದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಸಂಚಾರ ವ್ಯವಸ್ಥೆ ಸರಿಯಿದ್ದಲ್ಲಿ ಎಲ್ಲಾ ರೀತಿಯಿಂದಲೂ ವ್ಯವಹಾರಿಕವಾಗಿ, ಸಾಮಾಜಿಕವಾಗಿ ಬದಲಾವಣೆ ಹೊಂದಲು ಸಾಧ್ಯವಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಎಂಎಲ್ಸಿ ಅಮಾತೆಪ್ಪ ಕಂದಕೂರ, ಚನ್ನಪ್ಪಗೌಡ ಪಾಟೀಲ್, ಸಾಯಬಣ್ಣ ಸಿರನೇತಿ, ಸಿದ್ದು ಮಡ್ನಾಳ, ಬಸವರಾಜಪ್ಪಗೌಡ ಕಂದಕೂರ, ಮೈಲಾರಪ್ಪ ಕಂದಕೂರ, ಶರಣಗೌಡ ಪೋ.ಪಾಟೀಲ್, ಮಾರ್ತಾಂಡಪ್ಪ ಕಂದಕೂರ, ಗ್ರಾಪಂ ಸದಸ್ಯ ಶಿವಪ್ಪ ಮತ್ತು ಮಾಜಿ ಗ್ರಾಪಂ ಸದಸ್ಯರಾದ ಶಂಕ್ರಪ್ಪ, ಅಂಬಲಪ್ಪ, ಮಲ್ಲಪ್ಪ ಸೇರಿದಂತೆ ಇತರರಿದ್ದರು.

Related Articles

Leave a Reply

Your email address will not be published. Required fields are marked *

Back to top button