ಪ್ರಮುಖ ಸುದ್ದಿ
ಶಹಾಪುರಃಕಾಲು ಜಾರಿ ಕಾಲುವೆಗೆ ಬಿದ್ದ ಮಹಿಳೆ ಸಾವು
ಕಾಲು ಜಾರಿ ಕಾಲುವೆಗೆ ಬಿದ್ದ ಮಹಿಳೆ ಸಾವು
ಶಹಾಪುರ: ಬಟ್ಟೆ ತೊಳೆಯಲೆಂದು ಕಾಲುವೆಗೆ ಹೋಗಿದ್ದ ಮಹಿಳೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ತಾಲೂಕಿನ ನಾಗನಟಗಿ ತಾಂಡಾದಲ್ಲಿ ಶುಕ್ರವಾರ ನಡೆದಿದೆ. ತಾಂಡಾ ನಿವಾಸಿ ಶಾಂತಾಬಾಯಿ ಗಂಡ ಸೋಮುನಾಯಕ ಜಾದವ್ (45) ಎಂಬ ಮಹಿಳೆಯೇ ಮೃತಪಟ್ಟ ದುರ್ದೈವಿ. ತಾಂಡಾ ಸಮೀಪವಿರುವ ದೊಡ್ಡ ಕಾಲುವೆಗೆ ಬಟ್ಟೆಗಳನ್ನೊತ್ತು ತೊಳೆಯಲು ತೆರಳಿದ್ದಳು ಎನ್ನಲಾಗಿದೆ.
ಬಟ್ಟೆ ತೊಳೆಯುವ ವೇಳೆ ಕಾಲುಜಾರಿ ಕಾಲುವೆಗೆ ಬಿದ್ದಿದ್ದಾಳೆ. ಪರಿಣಾಮ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪಿಎಸ್‍ಐ ಕೃಷ್ಣಾ ಸುಬೇದಾರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.